200 ಕ್ಕೂ ಹೆಚ್ಚು... ಧೋನಿಗೆ ಸರಿಸಾಟಿ ಯಾರೂ ಇಲ್ಲ

16 April 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ 200 ಕ್ಕೂ ಹೆಚ್ಚು ವಿಕೆಟ್ ಉರುಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ.

ಮೊದಲ ಆಟಗಾರ

Pic credit: Google

ಐಪಿಎಲ್ 2025 ರ ಏಪ್ರಿಲ್ 14 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದರು.

ಧೋನಿ ಸಾಧನೆ

Pic credit: Google

ಐಪಿಎಲ್‌ನಲ್ಲಿ ಧೋನಿ ಇಲ್ಲಿಯವರೆಗೆ ವಿಕೆಟ್ ಕೀಪರ್ ಆಗಿ 201 ವಿಕೆಟ್‌ಗಳನ್ನು ಉರುಳಿಸಿದ್ದು ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

201 ವಿಕೆಟ್

Pic credit: Google

ಈ ವಿಷಯದಲ್ಲಿ ಧೋನಿ ಜೊತೆ ಸ್ಪರ್ಧಿಸಬಲ್ಲ ಆಟಗಾರ ಯಾರೂ ಇಲ್ಲ. 182 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ದಿನೇಶ್ ಕಾರ್ತಿಕ್ ಈಗಾಗಲೇ ನಿವೃತ್ತಿ ಹೊಂದಿದ್ದಾರೆ.

ಡಿಕೆಗೆ 2ನೇ ಸ್ಥಾನ

Pic credit: Google

ಎಬಿ ಡಿವಿಲಿಯರ್ಸ್ ಕೂಡ ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿ 126 ವಿಕೆಟ್‌ಗಳನ್ನು ಉರುಳಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

ಎಬಿ ಡಿವಿಲಿಯರ್ಸ್

Pic credit: Google

ನಾಲ್ಕನೇ ಸ್ಥಾನದಲ್ಲಿರುವ ರಾಬಿನ್ ಉತ್ತಪ್ಪ 124 ವಿಕೆಟ್, ವೃದ್ಧಿಮಾನ್ ಸಹಾ 118 ವಿಕೆಟ್​ಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.

ಉತ್ತಪ್ಪ ಮತ್ತು ಸಹಾ

Pic credit: Google

ಪ್ರಸ್ತುತ ಅಂಕಿ ಅಂಶಗಳನ್ನು ನೋಡಿದರೆ ಈಗಿನ ಆಟಗಾರರಲ್ಲಿ ಧೋನಿಗೆ ಪೈಪೋಟಿ ನೀಡುವವರು ಯಾರೂ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಸರಿಸಾಟಿ ಯಾರೂ ಇಲ್ಲ

Pic credit: Google