ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡ ಯಾವುದು?

19 April 2025

Pic credit: IPL X

 By: ಪೃಥ್ವಿ ಶಂಕರ 

ಐಪಿಎಲ್ ಆರಂಭವಾಗಿ 18 ವರ್ಷಗಳು ಕಳೆದಿದ್ದು, ಇದು ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಮತ್ತು ದೊಡ್ಡ ಲೀಗ್ ಆಗಿದೆ. ಇದರಲ್ಲಿ ಜಗತ್ತಿನ ಎಲ್ಲಾ ಸ್ಟಾರ್ ಆಟಗಾರರು ಭಾಗವಹಿಸುತ್ತಾರೆ.

18 ವರ್ಷ ಪೂರ್ಣ

Pic credit: IPL X

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೆ. ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಇದುವರೆಗೆ 268 ಪಂದ್ಯಗಳನ್ನು ಆಡಿದೆ.

ಮುಂಬೈ ಇಂಡಿಯನ್ಸ್

Pic credit: IPL X

ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿ, ಇಲ್ಲಿಯವರೆಗೆ 263 ಪಂದ್ಯಗಳಲ್ಲಿ ಭಾಗವಹಿಸಿದೆ.

ಆರ್‌ಸಿಬಿಗೆ 2ನೇ ಸ್ಥಾನ

Pic credit: IPL X

ಮುಂಬೈ ಮತ್ತು ಆರ್‌ಸಿಬಿ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಸ್ಥಾನದಲ್ಲಿದ್ದು ಇಲ್ಲಿಯವರೆಗೆ 259 ಪಂದ್ಯಗಳನ್ನು ಆಡಿದೆ

ಕೆಕೆಆರ್ ಟಾಪ್-3

Pic credit: IPL X

ಪಂಜಾಬ್ ಕಿಂಗ್ಸ್ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್ ಈ ಲೀಗ್‌ನಲ್ಲಿ ಇದುವರೆಗೆ 253 ಪಂದ್ಯಗಳನ್ನು ಆಡಿದೆ.

4ನೇ ಸ್ಥಾನ ಪಂಜಾಬ್​ಗೆ

Pic credit: IPL X

5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಅಗ್ರ 5 ರಲ್ಲಿದ್ದು, ಇದುವರೆಗೆ 246 ಪಂದ್ಯಗಳನ್ನು ಆಡಿದೆ.

ಸಿಎಸ್​ಕೆಗೆ 5 ನೇ ಸ್ಥಾನ

Pic credit: IPL X

ರಾಜಸ್ಥಾನ ರಾಯಲ್ಸ್ ತಂಡ ಇದುವರೆಗೆ 229 ಪಂದ್ಯಗಳನ್ನು ಆಡಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 189 ಪಂದ್ಯಗಳ ಭಾಗವಾಗಿದೆ.

ಆರ್​ಆರ್, ಎಸ್​ಆರ್​ಹೆಚ್

Pic credit: IPL X