ಧೋನಿಯ ಮೈಲಿಗಲ್ಲು ಪಂದ್ಯದಲ್ಲೇ ಎಡವಿದ ಸಿಎಸ್​ಕೆ

27 April 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ 2025 ರಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳ ಸೋಲನ್ನು ಅನುಭವಿಸಿತು.

ಚೆನ್ನೈಗೆ ಸೋಲು

Pic credit: Google

ಇದು ಸಿಎಸ್‌ಕೆ ನಾಯಕ ಧೋನಿ ಅವರ 400 ನೇ ಟಿ20 ಪಂದ್ಯವಾಗಿತ್ತು. ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ನಂತರ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು.

400ನೇ ಪಂದ್ಯ

Pic credit: Google

ಆದರೆ, ಈ ಮೈಲಿಗಲ್ಲು ಪಂದ್ಯ ಧೋನಿಗೆ ವಿಶೇಷವಾದದ್ದೇನೂ ಆಗಿರಲಿಲ್ಲ. ತಮ್ಮ 400 ನೇ ಪಂದ್ಯದಲ್ಲಿ ಧೋನಿ ಬ್ಯಾಟ್ ಕೆಲಸ ಮಾಡಲಿಲ್ಲ ಅಥವಾ ಅವರ ತಂಡವೂ ಗೆಲ್ಲಲಿಲ್ಲ.

ಧೋನಿಗೆ ಸೋಲು

Pic credit: Google

ಧೋನಿ ತಮ್ಮ 150ನೇ ಪಂದ್ಯದಲ್ಲಿ ಮಾತ್ರ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಇದರ ನಂತರ, ಅವರ ತಂಡವು ಉಳಿದ ಎಲ್ಲಾ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.

150ನೇ ಪಂದ್ಯದಲ್ಲಿ ಗೆಲುವು

Pic credit: Google

ಧೋನಿಯ 50 ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್ ವಿರುದ್ಧ ಸೋತಿತ್ತು. ಹಾಗೆಯೇ 100ನೇ ಪಂದ್ಯದಲ್ಲಿ ಟ್ರಿನಿಡಾಡ್-ಟೊಬಾಗೊ ತಂಡವು ಚೆನ್ನೈ ತಂಡವನ್ನು 12 ರನ್‌ಗಳಿಂದ ಸೋಲಿಸಿತು.

50ನೇ ಪಂದ್ಯದಲ್ಲಿ ಸೋಲು

Pic credit: Google

150 ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೆನ್ನೈ 15 ರನ್​ಗಳ ಗೆಲುವು ಸಾಧಿಸಿತ್ತು. 200ನೇ ಪಂದ್ಯದಲ್ಲಿ ಹೈದರಾಬಾದ್ ತಂಡವು ಚೆನ್ನೈ ತಂಡವನ್ನು 22 ರನ್‌ಗಳಿಂದ ಸೋಲಿಸಿತು.

200ನೇ ಪಂದ್ಯ ಸೋಲು

Pic credit: Google

250ನೇ ಪಂದ್ಯದಲ್ಲಿ ಪುಣೆ ವಿರುದ್ಧ ಪಂಜಾಬ್ 7 ವಿಕೆಟ್‌ಗಳ ಜಯ ಸಾಧಿಸಿದರೆ,  300ನೇ ಪಂದ್ಯದಲ್ಲಿ ಭಾರತವನ್ನು  ನ್ಯೂಜಿಲೆಂಡ್ 4 ರನ್‌ಗಳಿಂದ ಸೋಲಿಸಿತ್ತು.

300ನೇ ಪಂದ್ಯ ಸೋಲು

Pic credit: Google

350ನೇ ಪಂದ್ಯದಲ್ಲಿ ಪಂಜಾಬ್ ತಂಡವು ಚೆನ್ನೈ ತಂಡವನ್ನು 11 ರನ್‌ಗಳಿಂದ ಸೋಲಿಸಿದರೆ, ಇದೀಗ 400ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಚೆನ್ನೈ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ.

400ನೇ ಪಂದ್ಯ ಸೋಲು

Pic credit: Google