19-12-2023

ಯಾರ ಬಳಿ ಎಷ್ಟು ಹಣವಿದೆ?: ಇಲ್ಲಿದೆ ಫುಲ್ ಡಿಟೇಲ್ಸ್

Author: Vinay Bhat

ಚೆನ್ನೈ ಸೂಪರ್ ಕಿಂಗ್ಸ್

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2024 ಮಿನಿ ಹರಾಜನ್ನು 31.4 ಕೋಟಿ ರೂಪಾಯಿಗಳೊಂದಿಗೆ ಪ್ರವೇಶಿಸಲಿದೆ. ಆರು ಸ್ಲಾಟ್‌ಗಳು ಖಾಲಿ ಇವೆ.

ಮುಂಬೈ ಇಂಡಿಯನ್ಸ್

ಮುಂಬೈ ತಂಡದಲ್ಲಿ 8 ಸ್ಥಾನಗಳಿವೆ. ಹರಾಜಿನಲ್ಲಿ 4 ವಿದೇಶಿ ಆಟಗಾರರನ್ನು ಖರೀದಿಸಬಹುದು. MI ಬಳಿ 17.75 ಕೋಟಿ ರೂಪಾಯಿ ಪರ್ಸ್ ಇದೆ.

ಆರ್'ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನ ಮುಂಚೆಯೇ ಕೆಲವು ದೊಡ್ಡ ಬಿಡುಗಡೆಗಳನ್ನು ಮಾಡಿದೆ ಮತ್ತು 23.25 ಕೋಟಿ ರೂ. ಇದ್ದು, ಆರು ಖಾಲಿ ಸ್ಲಾಟ್‌ಗಳನ್ನು ಹೊಂದಿದ್ದಾರೆ.

ಗುಜರಾತ್ ಟೈಟಾನ್ಸ್

ಗಿಲ್ ನೇತೃತ್ವದ ಗುಜರಾತ್ ಐಪಿಎಲ್ 2024 ಮಿನಿ ಹರಾಜಿನಲ್ಲಿ ಅತಿ ದೊಡ್ಡ ಪರ್ಸ್‌ನೊಂದಿಗೆ ಪ್ರವೇಶಿಸಲಿದೆ. ಅವರ ಬಳಿ 38.15 ಕೋಟಿ ರೂ. ಇದೆ.

ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್ ಬಳಿ 13.15 ಕೋಟಿ ರೂಪಾಯಿಗಳ ಪರ್ಸ್ ಮತ್ತು ಒಟ್ಟು ಆರು ಸ್ಲಾಟ್‌ಗಳನ್ನು ಹೊಂದಿದೆ. ಆದರೆ, 2 ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದು.

ಸನ್ ರೈಸರ್ಸ್ ಹೈದರಾಬಾದ್

ಆರು ಆಟಗಾರರನ್ನು ಬಿಡುಗಡೆ ಮಾಡಿದ ಹೈದರಾಬಾದ್ ಬಳಿ 34 ಕೋಟಿ ರೂಪಾಯಿಗಳ ಪರ್ಸ್ ಹೊಂದಿದೆ. ಮಿಚೆಲ್ ಸ್ಟಾರ್ಕ್ ಅಥವಾ ಪ್ಯಾಟ್ ಕಮ್ಮಿನ್ಸ್ ಮೇಲೆ ಕಣ್ಣಿಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ 11 ಆಟಗಾರರನ್ನು ಬಿಡುಗಡೆ ಮಾಡಿದೆ ಮತ್ತು 28.95 ಕೋಟಿ ರೂ. ಹೊಂದಿದ್ದು, 9 ಸ್ಲಾಟ್‌ಗಳನ್ನು ತುಂಬಬಹುದು.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್ 8 ಆಟಗಾರರನ್ನು ಖರೀದಿಸಬಹುದು. ಇವರ ಬಳಿ ದೊಡ್ಡ ಮೊತ್ತವಿಲ್ಲ. ಇರುವುದು ಕೇವಲ 14.5 ಕೋಟಿ ರೂ.

ಪಂಜಾಬ್ ಕಿಂಗ್ಸ್

ಐವರು ಆಟಗಾರರನ್ನು ಬಿಡುಗಡೆ ಮಾಡಿದರೂ ಪಂಜಾಬ್ ಕಿಂಗ್ಸ್ ಬಳಿ 29.1 ಕೋಟಿ ರೂ. ಮತ್ತು ಎಂಟು ಸ್ಲಾಟ್‌ಗಳು ಖಾಲಿ ಇವೆ.

ಕೋಲ್ಕತ್ತಾ ನೈಟ್ ರೈಡರ್ಸ್

ಒಟ್ಟು 12 ಆಟಗಾರರನ್ನು ಬಿಡುಗಡೆ ಮಾಡಿದ ಕೆಕೆಆರ್ ಬಳಿ 12 ಸ್ಲಾಟ್‌ಗಳು ಲಭ್ಯವಿದೆ. 32.7 ಕೋಟಿ ರೂ. ಇವರ ಖಾತೆಯಲ್ಲಿದೆ.