16-12-2023

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತೆಸೆಯಲು ಕಾರಣವೇನು ಗೊತ್ತೇ?

Author: Vinay Bhat

ಎಂಐ ದೊಡ್ಡ ನಿರ್ಧಾರ

ಐಪಿಎಲ್ 2024 ರ ಮೊದಲು, ಮುಂಬೈ ಇಂಡಿಯನ್ಸ್ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಿದೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಅವರನ್ನು ಹರಾಜಿಗೂ ಮುಂಚೆಯೇ ಗುಜರಾತ್ ಟೈಟಾನ್ಸ್‌ ತಂಡದಿಂದ ಮುಂಬೈ ಇಂಡಿಯನ್ಸ್‌ ವ್ಯಾಪಾರ ಮಾಡಿಕೊಂಡಿತು.

ಕಾರಣಗಳೇನು?

ಹೀಗಿರುವಾಗ ಮುಂಬೈ ನಾಯಕನ ಬದಲಾವಣೆಗೆ ಇಷ್ಟೊಂದು ಆತುರ ತೋರಿದ್ದು ಏಕೆ ಮತ್ತು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲು ಪ್ರಮುಖ ಕಾರಣಗಳೇನು ಎಂಬ ಪ್ರಶ್ನೆ ಉದ್ಭವಿಸಿದೆ.

ರೋಹಿತ್ ವಯಸ್ಸು?

ಮೊದಲ ಕಾರಣ ರೋಹಿತ್ ವಯಸ್ಸು. ಇವರು 36 ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಹುಶಃ ಐಪಿಎಲ್ 2024 ಕೊನೆಯ ಸೀಸನ್ ಆಗಿರಬಹುದು, ಆದ್ದರಿಂದ ಮುಂಬೈ ಈಗಾಗಲೇ ಬದಲಾವಣೆ ಪ್ರಾರಂಭಿಸಿದೆ.

ಪರಿವರ್ತನೆ

ಪರಿವರ್ತನೆಯನ್ನು ಸರಿಯಾಗಿ ಕಾರ್ಯಗತಗೊಳಿಸುವ ಪ್ಲಾನ್ ಮುಂಬೈ ಮಾಡಿರಬಹುದು. ರೋಹಿತ್ ಇರುವಾಗಲೇ ಹೊಸ ನಾಯಕ ಬಂದರೆ ಉತ್ತಮ ಎಂದು ಯೋಚಿಸಿರಬಹುದು.

ಭವಿಷ್ಯದ ಮೇಲೆ ಕಣ್ಣು

ಮೂರನೇ ಪ್ರಮುಖ ಕಾರಣವೆಂದರೆ, ಮುಂಬೈಯ ಭವಿಷ್ಯದ ಯೋಜನೆ. ಮುಂಬರುವ 4-5 ವರ್ಷಗಳವರೆಗೆ ತಂಡವನ್ನು ಮುನ್ನಡೆಸಬಲ್ಲ ನಾಯಕನನ್ನು ಸಿದ್ಧಗೊಳಿಸುವುದು ಆಗಿರಬಹುದು.

ಶಾಕಿಂಗ್

ಮುಂಬೈ ಇಂಡಿಯನ್ಸ್ ಫ್ಯಾನ್ಸ್'ಗಂತು ಇದು ಆಘಾತಕಾರಿ ಸುದ್ದಿಯೇ ಹೌದು. ಫ್ರಾಂಚೈಸಿಯ ಈ ನಿರ್ಧಾರ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದೆ.

ಐದು ಪ್ರಶಸ್ತಿ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. ಅವರನ್ನು ಈ ರೀತಿ ತೆಗೆದುಹಾಕಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.