IPL: ಐಪಿಎಲ್ನಿಂದ ದಿನೇಶ್ ಕಾರ್ತಿಕ್ ಸಂಪಾದಿಸಿದ್ದು ಎಷ್ಟು ಕೋಟಿ ಗೊತ್ತಾ?
Author: ಪೃಥ್ವಿ ಶಂಕರ
ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನೊಂದಿಗೆ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ವೃತ್ತಿಜೀವನವೂ ಕೊನೆಗೊಂಡಿತು.
ಐಪಿಎಲ್‌ನಲ್ಲಿ ಇದು ಅವರ ಕೊನೆಯ ಸೀಸನ್ ಎಂದು ಕಾರ್ತಿಕ್ ಟೂರ್ನಿಯ ಆರಂಭಕ್ಕೂ ಮುನ್ನವೇ ಘೋಷಿಸಿದ್ದರು.
ಐಪಿಎಲ್ ಆರಂಭದಿಂದಲೂ ಲೀಗ್‌ನ ಭಾಗವಾಗಿರುವ ಕಾರ್ತಿಕ್, ಎಲ್ಲಾ 17 ಸೀಸನ್‌ಗಳನ್ನು ಆಡಿದ್ದಾರೆ ಮತ್ತು ಈ ಅವಧಿಯಲ್ಲಿ 6 ವಿಭಿನ್ನ ತಂಡಗಳ ಭಾಗವಾಗಿದ್ದರು.
ಕಾರ್ತಿಕ್ ಅವರ ವೃತ್ತಿಜೀವನವು ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಪ್ರಾರಂಭವಾಯಿತು. ನಂತರ ಅವರು ಕಿಂಗ್ಸ್ XI ಪಂಜಾಬ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.
ಕಾರ್ತಿಕ್ ಪ್ರತಿಯೊಂದು ಫ್ರಾಂಚೈಸಿಯಿಂದಲೂ ಉತ್ತಮ ಬಿಡ್ ಪಡೆದಿದ್ದರು. ಹೀಗೆ ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಅವರು ಸಂಬಳದಿಂದ ಒಟ್ಟು ರೂ 92.42 ಕೋಟಿ ರೂ. ಸಂಪಾಧಿಸಿದ್ದಾರೆ.
ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ 4 ಸೀಸನ್‌ಗಳಲ್ಲಿ 29.6 ಕೋಟಿ ರೂ. ಸಂಭಾವನೆ ಪಡೆದಿದ್ದರೆ, ಆರ್‌ಸಿಬಿಯಿಂದ 4 ಸೀಸನ್‌ಗಳಲ್ಲಿ 27 ಕೋಟಿ ರೂ ಸಂಬಳ ಪಡೆದಿದ್ದರು.
2012 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ ಒಂದು ಸೀಸನ್‌ನಲ್ಲಿ ಕಾರ್ತಿಕ್ ಬರೋಬ್ಬರಿ 12.5 ಕೋಟಿ ರೂ. ಸಂಭಾವನೆ ಪಡೆದಿದ್ದರು.