23-05-2024
IPL: ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್ಗಳಿವರು
Author: ಪೃಥ್ವಿ ಶಂಕರ
2022ರ ಐಪಿಎಲ್ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಒಟ್ಟು 128 ಬೌಂಡರಿಗಳನ್ನು ಬಾರಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 2016ರ ಐಪಿಎಲ್‌ನಲ್ಲಿ ಒಟ್ಟು 121 ಬೌಂಡರಿಗಳನ್ನು ಬಾರಿಸಿದ್ದರು.
2016ರ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಒಟ್ಟು 119 ಬೌಂಡರಿಗಳನ್ನು ಬಾರಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
2023ರ ಐಪಿಎಲ್ ಸೀಸನ್‌ನಲ್ಲಿ ಶುಭ್ಮನ್ ಗಿಲ್ ಒಟ್ಟು 118 ಬೌಂಡರಿಗಳನ್ನು ಬಾರಿಸಿದ್ದರು.
ಮಾಜಿ ಆರ್ಸಿಬಿ ಬ್ಯಾಟರ್ ಕ್ರಿಸ್ ಗೇಲ್ 2013ರ ಐಪಿಎಲ್‌ನಲ್ಲಿ ಒಟ್ಟು 108 ಬೌಂಡರಿಗಳನ್ನು ಬಾರಿಸಿದ್ದರು.
ರಾಜಸ್ಥಾನ್ ಬ್ಯಾಟರ್ ಯಶಸ್ವಿ ಜೈಸ್ವಾಲ್ 2023 ರಲ್ಲಿ ಐಪಿಎಲ್ ಸೀಸನ್‌ನಲ್ಲಿ ಒಟ್ಟು 108 ಬೌಂಡರಿಗಳನ್ನು ಬಾರಿಸಿದ್ದರು.
ಕ್ರಿಸ್ ಗೇಲ್ 2012ರ ಐಪಿಎಲ್ನಲ್ಲೂ ಒಟ್ಟು 105 ಬೌಂಡರಿಗಳನ್ನು ಬಾರಿಸಿದ್ದರು.
2018ರ ಐಪಿಎಲ್‌ನಲ್ಲಿ ರಿಷಬ್ ಪಂತ್ ಒಟ್ಟು 105 ಬೌಂಡರಿಗಳನ್ನು ಬಾರಿಸಿದ್ದರು.
ಇದೀಗ ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಒಟ್ಟು 100 ಬೌಂಡರಿಗಳನ್ನು ಬಾರಿಸಿದ್ದಾರೆ.
NEXT: ಸೊನ್ನೆ ಶೂರ ಮ್ಯಾಕ್ಸ್ವೆಲ್; ಬೇಡದ ದಾಖಲೆ ಬರೆದ ಆರ್ಸಿಬಿ ಬ್ಯಾಟರ್