23-05-2024

IPL: ಸೊನ್ನೆ ಶೂರ ಮ್ಯಾಕ್ಸ್​ವೆಲ್; ಬೇಡದ ದಾಖಲೆ ಬರೆದ ಆರ್​ಸಿಬಿ ಬ್ಯಾಟರ್

Author: ಪೃಥ್ವಿ ಶಂಕರ

ಒಂದು ಐಪಿಎಲ್ ಆವೃತ್ತಿಯಲ್ಲಿ ಅಧಿಕ ಬಾರಿ ಗೋಲ್ಡನ್ ಡಕ್‌ಗೆ ಬಲಿಯಾದ ಆಟಗಾರರ ಪಟ್ಟಿಯಲ್ಲಿ ಇದೀಗ ಆರ್​ಸಿಬಿ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಥಾನ ಪಡೆದಿದ್ದಾರೆ.

ಮ್ಯಾಕ್ಸ್‌ವೆಲ್ ಹೊರತುಪಡಿಸಿ ಹಲವು ಬ್ಯಾಟರ್​ಗಳು ಏಕೈಕ ಆವೃತ್ತಿಯಲ್ಲಿ ಅಧಿಕ ಬಾರಿ ಗೋಲ್ಡನ್ ಡಕ್‌ಗೆ ಬಲಿಯಾದ ಬೇಡದ ದಾಖಲೆ ಬರೆದಿದ್ದಾರೆ. ಅವರ ವಿವರ ಇಲ್ಲಿದೆ.

ರಾಜಸ್ಥಾನದ ಸ್ಟಾರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಐದು ಬಾರಿ ಐಪಿಎಲ್‌ನಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ.

ಹರ್ಷಲ್ ಗಿಬ್ಸ್ ನಾಲ್ಕು ಬಾರಿ ಐಪಿಎಲ್‌ನಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ.

ಮನೀಶ್ ಪಾಂಡೆ ಕೂಡ ಒಂದು ಸೀಸನ್​ನಲ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ.

ಶಿಖರ್ ಧವನ್ 2020 ರಲ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದರು.

ಇಯಾನ್ ಮೋರ್ಗನ್ 2021 ರಲ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದರು.

ಐಪಿಎಲ್‌ನ ಒಂದು ಸೀಸನ್‌ನಲ್ಲಿ ನಿಕೋಲಸ್ ಪೂರನ್ ಕೂಡ ನಾಲ್ಕು ಬಾರಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು.

ದಿನೇಶ್ ಕಾರ್ತಿಕ್ ಐಪಿಎಲ್ 2023 ರಲ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್‌ಗೆ ವಿಕೆಟ್ ಒಪ್ಪಿಸಿದ್ದರು.