ನಾನು ಚಹಲ್ ಪತ್ನಿ ಧನಶ್ರೀ ವರ್ಮಾ ಫ್ಯಾನ್ ಎಂದ ಇಂಗ್ಲೆಂಡ್ ನಾಯಕ

26 February 2024

Author: Vinay Bhat

ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಅವರಿಗೆ ಭಾರತೀಯ ಕ್ರಿಕೆಟಿಗರಲ್ಲಿ ಮಾತ್ರವಲ್ಲ, ಈಗ ಇಂಗ್ಲೆಂಡ್ ಕ್ರಿಕೆಟಿನಲ್ಲಿ ಕೂಡ ಅಭಿಮಾನಿಗಳಿದ್ದಾರೆ ಎಂಬುದು ಸಾಭೀತಾಗಿದೆ.

ಧನಶ್ರೀ ಅಭಿಮಾನಿ

ಧನಶ್ರೀ ವರ್ಮಾ ನೃತ್ಯಗಾರ್ತಿಯಾಗಿದ್ದು, ತನ್ನ ಡ್ಯಾನ್ಸ್​ನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ನೃತ್ಯಕ್ಕೆ ಇಂಗ್ಲೆಂಡ್ ನಾಯಕ ಕೂಡ ಮನಸೋತಿದ್ದಾರೆ.

ನೃತ್ಯ ಗಾರ್ತಿ

ಇಂಗ್ಲೆಂಡ್‌ ಏಕದಿನ ಮತ್ತು ಟಿ20 ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಧನಶ್ರೀ ವರ್ಮಾ ಅವರ ದೊಡ್ಡ ಫ್ಯಾನ್ ಅಂತೆ.

ಜೋಸ್ ಬಟ್ಲರ್

ಜೋಸ್ ಬಟ್ಲರ್ ಅವರು ಧನಶ್ರೀ ವರ್ಮಾ ಅವರ ನೃತ್ಯವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇದೀಗ ಅವರು ಅವರ ಗೆಲುವಿಗಾಗಿ ನೀವು ಮತ ನೀಡಿ ಎಂದು ಮನವಿಯನ್ನೂ ಮಾಡಿದ್ದಾರೆ.

ಧನಶ್ರೀಗೆ ವೋಟ್

ಧನಶ್ರೀ ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ ಫೈನಲಿಸ್ಟ್ ಆಗಿದ್ದು, ಮಾರ್ಚ್ 2 ರಂದು ಫೈನಲ್ ನಡೆಯಲಿದೆ. ಇಲ್ಲಿ ಧನಶ್ರೀ ಜಯಿಸಲು ಜೋಸ್ ವೋಟ್ ಮಾಡಿ ಎಂದಿದ್ದಾರೆ.

ರಿಯಾಲಿಟಿ ಶೋ

ಧನಶ್ರೀ ವರ್ಮಾ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರ ಪತ್ನಿ. ಚಹಲ್ ಕೂಡ ತಮ್ಮ ಪತ್ನಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಯುಜ್ವೇಂದ್ರ ಚಹಲ್

ಧನಶ್ರೀಗೆ ಬಟ್ಲರ್ ಮತ ಮನವಿಗೆ ಕಾರಣವೆಂದರೆ ಅವರ ಪತಿ ಚಹಲ್ ಐಪಿಎಲ್‌ನಲ್ಲಿ ರಾಜಸ್ಥಾನ್ ಪರ ಆಡುತ್ತಾರೆ. ಬಟ್ಲರ್ ಕೂಡ ಆರ್​ಆರ್​ ತಂಡದ ಸ್ಟಾರ್ ಬ್ಯಾಟರ್ ಆಗಿದ್ದಾರೆ.

ರಾಜಸ್ಥಾನ್ ರಾಯಲ್ಸ್