11-12-2023

ಈ ವರ್ಷ ಹಣೆಮಣೆ ಏರಿದ ಟೀಮ್ ಇಂಡಿಯಾ ಪ್ಲೇಯರ್ಸ್ ಇವರೇ ನೋಡಿ

Author: Vinay Bhat

ಸಿಹಿ-ಕಹಿ

2023 ರಲ್ಲಿ, ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಸಿಹಿ-ಕಹಿಯ ಅನುಭವ ಪಡೆದರು. ಇದರ ಜೊತೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದರು.

ಮದುವೆಯ ವರ್ಷ

ಭಾರತದ ಹಲವು ಶ್ರೇಷ್ಠ ಕ್ರಿಕೆಟಿಗರಿಗೆ ಈ ವರ್ಷ ವಿಶೇಷವಾಗಿತ್ತು. ಕೆಎಲ್ ರಾಹುಲ್, ಶಾರ್ದೂಲ್ ಠಾಕೂರ್ ಸೇರಿದಂತೆ ಹಲವು ಆಟಗಾರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರಾಹುಲ್-ಅಥಿಯಾ

ಈ ವರ್ಷದ ಮೊದಲ ತಿಂಗಳಲ್ಲೇ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾದರು.

ಅಕ್ಷರ್-ಮೇಹಾ

ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ಜನವರಿಯಲ್ಲೇ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಅವರು ತಮ್ಮ ಗೆಳತಿ ಮೇಹಾ ಪಟೇಲ್ ಅವರನ್ನು ವಿವಾಹವಾದರು.

ಶಾರ್ದೂಲ್-ಮಿಥಾಲಿ

ಫೆಬ್ರವರಿಯಲ್ಲಿ ಈ ಪಟ್ಟಿಗೆ ಮತ್ತೊಬ್ಬ ಆಲ್ ರೌಂಡರ್ ಸೇರಿಕೊಂಡರು. ಶಾರ್ದೂಲ್ ಠಾಕೂರ್ ಅವರು ಮಿಥಾಲಿ ಪಾರುಲ್ಕರ್ ಅವರೊಂದಿಗೆ ವಿವಾಹವಾದರು.

ರುತುರಾಜ್-ಉತ್ಕರ್ಷ

ಜೂನ್‌ನಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರು ಉತ್ಕರ್ಷ ಪವಾರ್ ಅವರನ್ನು ವಿವಾಹವಾದರು.

ಪ್ರಸಿದ್ಧ್-ರಚನಾ

ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ಜೂನ್‌ನಲ್ಲಿ ತನ್ನ ಗೆಳತಿ ರಚನಾಳನ್ನು ಮದುವೆಯಾದರು.

ಮುಖೇಶ್-ದಿವ್ಯಾ

ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ನವೆಂಬರ್‌ನಲ್ಲಿ ದಿವ್ಯಾ ಸಿಂಗ್ ಅವರನ್ನು ವಿವಾಹವಾದರು.

ಸೈನಿ-ಸ್ವಾತಿ

ಮುಖೇಶ್ ಅವರಂತೆ ಭಾರತದ ಮತ್ತೊಬ್ಬ ವೇಗಿ ನವದೀಪ್ ಸೈನಿ ಕೂಡ ಸ್ವಾತಿ ಅಸ್ತಾನಾ ಅವರನ್ನು ನವೆಂಬರ್‌ನಲ್ಲಿ ವಿವಾಹವಾದರು.