ಇಶಾನ್ ಕಿಶನ್ ಪ್ರೇಯಸಿ ಅದಿತಿ ಹುಂಡಿಯಾ ಯಾರು ಗೊತ್ತಾ?

17  August 2024

Pic credit: Google

ಪೃಥ್ವಿ ಶಂಕರ

Pic credit: Google

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್, ದೇಶೀ ಲೀಗ್​ನಲ್ಲಿ ಭರ್ಜರಿ ಶತಕ ಸಿಡಿಸಿ ಮತ್ತೆ ಟೀಂ ಇಂಡಿಯಾವನ್ನು ಸೇರುವ ತವಕದಲ್ಲಿದ್ದಾರೆ.

Pic credit: Google

ಈ ನಡುವೆ ಇಶಾನ್ ಕಿಶನ್ ಅವರ ಗೆಳತಿ/ ಪ್ರೇಯಸಿ ಅದಿತಿ ಹುಂಡಿಯಾ ಸುದ್ದಿಯಲ್ಲಿದ್ದು, ಅವರ ಬಗ್ಗೆ ತಿಳಿಯಲು ನೆಟ್ಟಿಗರು ಗೂಗಲ್ ಮೊರೆ ಹೋಗಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅವರ ಬಹುಕಾಲದ ಗೆಳತಿ ಅದಿತಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Pic credit: Google

ಅದಿತಿ ಹುಂಡಿಯಾ ವೃತ್ತಿಪರ ಮಾಡೆಲ್. ಅವರು ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಅದಿತಿ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಕೂಡ ಆಗಿದ್ದರು.

Pic credit: Google

ಇದರ ಜೊತೆಗೆ ಅದಿತಿ 2018 ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ಮಾಡೆಲಿಂಗ್‌ನ ಹೊರತಾಗಿ, ಅದಿತಿ ಅನೇಕ ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

Pic credit: Google

ಅದಿತಿ ಹುಂಡಿಯಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಅವರು Instagram ನಲ್ಲಿ 3 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

Pic credit: Google

ಇನ್ನು ಇಶಾನ್ ಕಿಶನ್ ಮತ್ತು ಅದಿತಿ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡರೂ, ತಮ್ಮ ನಡುವಿನ ಸಂಬಂಧವನ್ನು ಇದುವರೆಗೆ ಎಲ್ಲೂ ಬಹಿರಂಗಪಡಿಸಿಲ್ಲ.

Pic credit: Google

ಇಶಾನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಇಶಾನ್ ಅವರನ್ನು ಬೆಂಬಲಿಸಲು ಅದಿತಿ ಹಲವಾರು ಬಾರಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಹಾಗೆಯೇ ಈ ಜೋಡಿ ಅನೇಕ ಬಾರಿ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ.