07-06-2024

ಇಂಜಿನಿಯರಿಂಗ್ ಪದವಿ ಪಡೆದಿರುವ ಸ್ಟಾರ್ ಕ್ರಿಕೆಟಿಗರಿವರು

Author: ಪೃಥ್ವಿ ಶಂಕರ

ಅಮೆರಿಕದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ತಂಡದ ಐತಿಹಾಸಿಕ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

ಮುಂಬೈ ಮೂಲದ ಸೌರವ್ ಕೇವಲ ಕ್ರಿಕೆಟಿಗ ಮಾತ್ರವಲ್ಲದೆ ವೃತ್ತಿಯಲ್ಲಿ ಇಂಜಿನಿಯರ್ ಕೂಡ ಆಗಿದ್ದು, ಅವರ ಆಸಕ್ತಿಯಿಂದಾಗಿ ಕ್ರಿಕೆಟ್ ಆಡುತ್ತಾರೆ.

ಇವರಲ್ಲದೆ ಹಲವು ಕ್ರಿಕೆಟಿಗರು ಇಂಜಿನಿಯರಿಂಗ್ ಪದವಿ ಪಡೆದಿದ್ದು, ತಮ್ಮ ವೃತ್ತಿ ಬದುಕನ್ನು ಕ್ರಿಕೆಟ್​ನಲ್ಲಿ ಕಳೆದಿದ್ದಾರೆ. ಅಂತಹವರ ವಿವರ ಇಲ್ಲಿದೆ.

ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಇಂಜಿನಿಯರ್ ಆಗಿದ್ದು,  ಚೆನ್ನೈನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಭಾರತ ತಂಡದ ಅನುಭವಿ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಬೆಂಗಳೂರಿನ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಭಾರತ ತಂಡದ ಮಾಜಿ ಬೌಲರ್ ಜಾವಗಲ್ ಶ್ರೀನಾಥ್ ಕೂಡ ಎಂಜಿನಿಯರ್ ಆಗಿದ್ದು, ಮೈಸೂರಿನಲ್ಲಿ ಪದವಿ ಪಡೆದಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅವರು ಕರಾಚಿಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ.