07-06-2024

ಏಕದಿನದಲ್ಲಿ ಅಧಿಕ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಏಕದಿನದಲ್ಲಿ ಅಧಿಕ ಬಾರಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ. ಇವರು 2015ರಲ್ಲಿ ಸತತ ನಾಲ್ಕು ಬಾರಿ ಶತಕ ಸಿಡಿಸಿದ್ದರು

ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ 2016 ರಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಏಕದಿನ ಶತಕಗಳನ್ನು ಬಾರಿಸಿದ್ದರು.

ಬಾಬರ್ ಆಝಂ 2022 ರಲ್ಲಿಯೂ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿದ್ದರು.

ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರು 2018 ರಲ್ಲಿ ಏಕದಿನದಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸಿದ್ದರು.

ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 2013 ರಲ್ಲಿ ಏಕದಿನದಲ್ಲಿ ಸತತ ಮೂರು ಶತಕಗಳನ್ನು ಕಲೆಹಾಕಿದ್ದರು.

ಎಬಿ ಡಿವಿಲಿಯರ್ಸ್ 2010 ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ್ದರು.

ಪಾಕಿಸ್ತಾನದ ಫಖರ್ ಜಮಾನ್ 2023 ರಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಏಕದಿನ ಶತಕ ಬಾರಿಸಿದ್ದರು.

ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ 2002 ರಲ್ಲಿ  ಮೂರು ಬ್ಯಾಕ್ ಟು ಬ್ಯಾಕ್ ಏಕದಿನ ಶತಕಗಳನ್ನು ಸಿಡಿಸಿದ್ದರು.

ವಿರಾಟ್ ಕೊಹ್ಲಿ 2018 ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಚಚ್ಚಿದ್ದರು.

ರೋಹಿತ್ ಶರ್ಮಾ ಕೂಡ 2019 ರಲ್ಲಿ ಏಕದಿನದಲ್ಲಿ ಸತತ ಮೂರು ಶತಕಗಳನ್ನು ಸಿಡಿಸುವಲ್ಲಿ ಯಶಸ್ವಿಯಾಗಿದ್ದರು.