06-06-2024

ನೇಪಾಳ ಕ್ರಿಕೆಟಿಗರ ಸಂಬಳ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ..!

Author: ಪೃಥ್ವಿ ಶಂಕರ

ಕ್ರಿಕೆಟ್‌ನಲ್ಲಿ ಸಾಕಷ್ಟು ಹಣವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಟೀಂ ಇಂಡಿಯಾದ ಆಟಗಾರರು ಗಳಿಸುವ ಆದಾಯವೇ ಇದಕ್ಕೆ ಉದಾಹರಣೆ.

ಆದರೆ ಕ್ರಿಕೆಟ್ ಆಡುವ ಎಲ್ಲಾ ತಂಡಗಳ ಪರಿಸ್ಥಿತಿ ಹೀಗೆ ಇಲ್ಲ. ಕೆಲವು ತಂಡಗಳು ಭರ್ಜರಿ ಸಂಬಳ ಪಡೆದರೆ, ಇನ್ನು ಕೆಲವು ತಂಡಗಳಿಗೆ ಸಿಗುವ ಸಂಬಳ ಕೇಳಿದರೆ ಎಲ್ಲರಿಗೂ ಅಚ್ಚರಿ ಮೂಡುತ್ತದೆ.

ಅಂತಹ ತಂಡಗಳಲ್ಲಿ ನೇಪಾಳವೂ ಒಂದಾಗಿದೆ. ನೇಪಾಳದ ಕ್ರಿಕೆಟಿಗರ ಸಂಬಳದ ಸ್ಥಿತಿಯ ಬಗ್ಗೆ ತಿಳಿದರೆ ನೀವು ಶಾಕ್ ಆಗಬಹುದು.

ನೇಪಾಳ ಕ್ರಿಕೆಟ್ ಮಂಡಳಿಯ ಅಡಿಯಲ್ಲಿ A ದರ್ಜೆಯಲ್ಲಿ ಬರುವ ಆಟಗಾರರ ವೇತನವು ಸ್ಥಳೀಯ ಕರೆನ್ಸಿಯಲ್ಲಿ ಕೇವಲ 60000 ರೂ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಆ ಮೊತ್ತವು ಕೇವಲ 37000 ರೂ. ಆಗಿದೆ.

ಅದೇ ರೀತಿ, ಕೇಂದ್ರ ಒಪ್ಪಂದದ ಅಡಿಯಲ್ಲಿ, ನೇಪಾಳದ B ದರ್ಜೆಯ ಕ್ರಿಕೆಟಿಗರಿಗೆ 31 ಸಾವಿರ ಭಾರತೀಯ ರೂಪಾಯಿಗಳನ್ನು ಮತ್ತು C ದರ್ಜೆಯ ಆಟಗಾರರಿಗೆ 25 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಹಾಗೆಯೇ ಒಂದು ಪಂದ್ಯಕ್ಕೆ ನೇಪಾಳಿ ಆಟಗಾರರು ಪಡೆಯುವ ಹಣ ಇನ್ನೂ ಕಡಿಮೆ. ವರದಿಯೊಂದರ ಪ್ರಕಾರ, ಏಕದಿನ ಪಂದ್ಯವನ್ನು ಆಡಲು ಕೇವಲ 6200 ರೂ. ವೇತನ ನೀಡಲಾಗುತ್ತದೆ.

ಇನ್ನು ನೇಪಾಳಿ ಆಟಗಾರರು ಟಿ20 ಪಂದ್ಯ ಆಡಲು ಕೇವಲ 3100 ರೂ. ವೇತನವನಷ್ಟೇ ಪಡೆಯುತ್ತಾರೆ.

ಇದರರ್ಥ ನೇಪಾಳ ಕ್ರಿಕೆಟಿಗರ ಸಂಬಳವನ್ನು ಭಾರತೀಯ ಕ್ರಿಕೆಟಿಗರಿಗೆ ಹೊಲಿಸಿದರೆ, ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಪಡೆಯುವ ಸಂಬಳವನ್ನು ಇಡೀ ನೇಪಾಳ ತಂಡಕ್ಕೆ ನೀಡಬಹುದಾಗಿದೆ.