03-06-2024

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ತಂಡ ಯಾವುದು ಗೊತ್ತಾ?

Author: ಪೃಥ್ವಿ ಶಂಕರ

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಈ ತಂಡ ಇದುವರೆಗೆ 239 ಸಿಕ್ಸರ್‌ಗಳನ್ನು ಬಾರಿಸಿದೆ.

ಎರಡನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡ ಇದುವರೆಗೆ 224 ಸಿಕ್ಸರ್‌ ಬಾರಿಸಿದೆ.

220 ಸಿಕ್ಸರ್‌ಗಳನ್ನು ಹೊಡಿದಿರುವ ಪಾಕಿಸ್ತಾನ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 216 ಸಿಕ್ಸರ್‌ಗಳನ್ನು ಬಾರಿಸಿರುವ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.

ಭಾರತ ತಂಡ ಐದನೇ ಸ್ಥಾನದಲ್ಲಿದ್ದು, ತಂಡ ಇದುವರೆಗೆ 207 ಸಿಕ್ಸರ್‌ಗಳನ್ನು ಬಾರಿಸಿದೆ.

ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತನ್ನ ಹೆಸರಿನಲ್ಲಿ 200 ಸಿಕ್ಸರ್‌ಗಳನ್ನು ಹೊಂದಿದೆ.

ನ್ಯೂಜಿಲೆಂಡ್ ತಂಡ ಇದುವರೆಗೆ 196 ಸಿಕ್ಸರ್‌ಗಳನ್ನು ಬಾರಿಸಿ 7ನೇ ಸ್ಥಾನದಲ್ಲಿದೆ.

186 ಸಿಕ್ಸರ್‌ಗಳನ್ನು ಬಾರಿಸಿರುವ ದಕ್ಷಿಣ ಆಫ್ರಿಕಾ ತಂಡ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ 142 ಸಿಕ್ಸರ್‌ಗಳನ್ನು ಸಿಡಿಸಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.