25-05-2024

IPL: ತಂಡವನ್ನು ಫೈನಲ್​ಗೆ ಕೊಂಡೊಯ್ದ ಆಸ್ಟ್ರೇಲಿಯಾದ ನಾಯಕರಿವರು

Author: ಪೃಥ್ವಿ ಶಂಕರ

ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ 10 ನೇ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್, ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಐಪಿಎಲ್ 2024 ರ ಫೈನಲ್ ತಲುಪಿದೆ.

ಮೇ 26 ರಂದು ಐಪಿಎಲ್ 2024 ರ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್‌ನಲ್ಲಿ ಇದು ಆರನೇ ಬಾರಿಗೆ ಆಸ್ಟ್ರೇಲಿಯಾದ ನಾಯಕ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ.

ಶೇನ್ ವಾರ್ನ್ (2008): ಶೇನ್ ವಾರ್ನ್ ನಾಯಕತ್ವದಲ್ಲಿ, ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಆವೃತ್ತಿಯಲ್ಲೇ ಫೈನಲ್‌ಗೆ ತಲುಪಿದ್ದು ಮಾತ್ರವಲ್ಲದೆ ಟ್ರೋಫಿಯನ್ನು ಗೆದ್ದುಕೊಂಡಿತು.

ಆಡಮ್ ಗಿಲ್‌ಕ್ರಿಸ್ಟ್ (2009): ಆಡಮ್ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿ ಡೆಕ್ಕನ್ ಚಾರ್ಜಸ್ ತಂಡ ಐಪಿಎಲ್‌ ಪ್ರಶಸ್ತಿ ಗೆದ್ದಿತ್ತು.

ಜಾರ್ಜ್ ಬೈಲಿ (2014): ಪಂಜಾಬ್ ಇದುವರೆಗೆ ಒಮ್ಮೆ ಮಾತ್ರ ಐಪಿಎಲ್ ಫೈನಲ್ ಆಡಿದೆ. 2014 ರಲ್ಲಿ, ಜಾರ್ಜ್ ಬೈಲಿ ನಾಯಕತ್ವದಲ್ಲಿ ತಂಡವು ಫೈನಲ್ ತಲುಪಿತ್ತು.

ಡೇವಿಡ್ ವಾರ್ನರ್ (2016): ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಹೈದರಾಬಾದ್ 2016 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಎಲಿಮಿನೇಟರ್ ಆಡುವ ಮೂಲಕ ಐಪಿಎಲ್ ಗೆದ್ದ ಏಕೈಕ ನಾಯಕ ವಾರ್ನರ್.

ಸ್ಟೀವ್ ಸ್ಮಿತ್ (2017): ಧೋನಿ ನಾಯಕತ್ವದಿಂದ ಕೆಳಗಿಳಿದ ನಂತರ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕತ್ವವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್, ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದರು.