02-06-2024

T20 World Cup : ಓವರ್‌ನಲ್ಲಿ 10 ಕ್ಕಿಂತ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಬೌಲರ್‌ಗಳಿವರು

Author: ಪೃಥ್ವಿ ಶಂಕರ

2022 ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಒಂದು ಓವರ್‌ನಲ್ಲಿ ಮಾರ್ಕ್ ಆಡೈರ್ ಒಟ್ಟು 11 ಎಸೆತಗಳನ್ನು ಬೌಲ್ ಮಾಡಿದ್ದರು.

ಜೆರೆಮಿ ಗಾರ್ಡನ್ ಈಗ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಪಂದ್ಯದ ಒಂದು ಓವರ್‌ನಲ್ಲಿ ಒಟ್ಟು 11 ಎಸೆತಗಳನ್ನು ಬೌಲ್ ಮಾಡಿದರು.

ಮುಸ್ತಾಫಿಜುರ್ ರೆಹಮಾನ್ 2021 ರ ಟಿ20 ವಿಶ್ವಕಪ್‌ನಲ್ಲಿ ಒಮನ್ ವಿರುದ್ಧದ ಒಟ್ಟು 11 ಎಸೆತಗಳನ್ನು ಬೌಲ್ ಮಾಡಿದ್ದರು.

ಕೆಮರ್ ರೋಚ್ 2010 ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದ ಒಂದು ಓವರ್‌ನಲ್ಲಿ ಒಟ್ಟು 11 ಎಸೆತಗಳನ್ನು ಬೌಲ್ ಮಾಡಿದ್ದರು.

2009ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೊಹೈಲ್ ತನ್ವೀರ್ ಒಂದು ಓವರ್‌ನಲ್ಲಿ ಒಟ್ಟು 11 ಎಸೆತಗಳನ್ನು ಎಸೆದಿದ್ದರು.

ಬಾಯ್ಡ್ ರಾಂಕಿನ್ 2012 ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಓವರ್‌ನಲ್ಲಿ ಒಟ್ಟು 10 ಎಸೆತಗಳನ್ನು ಬೌಲ್ ಮಾಡಿದ್ದರು.

2021 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಒಂದು ಓವರ್‌ನಲ್ಲಿ ಜೆಜೆ ಸ್ಮಿತ್ ಒಟ್ಟು 10 ಎಸೆತಗಳನ್ನು ಬೌಲ್ ಮಾಡಿದ್ದರು.

2009 ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಒಂದು ಓವರ್‌ನಲ್ಲಿ ಇಸುರು ಉದಾನಾ ಒಟ್ಟು 10 ಎಸೆತಗಳನ್ನು ಬೌಲ್ ಮಾಡಿದ್ದರು.