23 July 2024
Pic credit - Google
ಪೃಥ್ವಿಶಂಕರ
Pic credit - Google
ಟಿ20ಯಲ್ಲಿ ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದು, ಹಿಟ್ಮ್ಯಾನ್ ಇದುವರೆಗೆ ಆಡಿರುವ 17 ಇನ್ನಿಂಗ್ಸ್‌ಗಳಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Pic credit - Google
ಎರಡನೇ ಸ್ಥಾನದಲ್ಲಿರುವ ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಆಡಿರುವ 5 ಇನ್ನಿಂಗ್ಸ್‌ಗಳಲ್ಲಿ 15 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Pic credit - Google
ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಆಡಿದ 11 ಇನ್ನಿಂಗ್ಸ್‌ಗಳಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
Pic credit - Google
ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
Pic credit - Google
ಕನ್ನಡಿಗ ಕೆಎಲ್ ರಾಹುಲ್ ಲಂಕಾ ವಿರುದ್ಧ ಆಡಿರುವ 8 ಇನ್ನಿಂಗ್ಸ್‌ಗಳಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Pic credit - Google
ಇತ್ತೀಚೆಗಷ್ಟೇ ಟಿ20 ಮಾದರಿಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Pic credit - Google
ಹಲವು ದಿನಗಳ ಬಳಿಕ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಆಡಿರುವ 8 ಇನ್ನಿಂಗ್ಸ್‌ಗಳಲ್ಲಿ 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Pic credit - Google
ಆಲ್ರೌಂಡರ್ ಅಕ್ಷರ್ ಪಟೇಲ್ ಲಂಕಾ ವಿರುದ್ಧ ಆಡಿರುವ 3 ಇನ್ನಿಂಗ್ಸ್‌ಗಳಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ.