13-06-2024

T20I ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಭಾರತೀಯರಿವರು

Author: ಪೃಥ್ವಿ ಶಂಕರ

ಅಂತಾರಾಷ್ಟ್ರೀಯ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಟಿ20ಯಲ್ಲಿ ಇದುವರೆಗೆ 12 ಬಾರಿ ಡಕ್ ಔಟ್ ಆಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ 06 ಬಾರಿ ಡಕ್ ಔಟ್ ಆಗಿದ್ದಾರೆ.

ಕನ್ನಡಿಗೆ ಕೆಎಲ್ ರಾಹುಲ್ ಕೂಡ ಅಂತಾರಾಷ್ಟ್ರೀಯ ಟಿ20ಯಲ್ಲಿ 05 ಬಾರಿ ಡಕ್ ಔಟ್ ಆಗಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಶ್ರೇಯಸ್ ಅಯ್ಯರ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 04 ಬಾರಿ ಡಕ್ ಔಟ್ ಆಗಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಾಷಿಂಗ್ಟನ್ ಸುಂದರ್ ಕೂಡ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 04 ಬಾರಿ ಡಕ್ ಔಟ್ ಆಗಿದ್ದಾರೆ.

ರವೀಂದ್ರ ಜಡೇಜಾ, ಆಶಿಶ್ ನೆಹ್ರಾ, ಹಾರ್ದಿಕ್ ಪಾಂಡ್ಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 03 ಬಾರಿ ಡಕ್ ಔಟ್ ಆಗಿದ್ದಾರೆ.

ರಿಷಬ್ ಪಂತ್, ಯೂಸುಫ್ ಪಠಾಣ್, ಸುರೇಶ್ ರೈನಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 03 ಬಾರಿ ಡಕ್ ಔಟ್ ಆಗಿದ್ದಾರೆ.

ಅಮೆರಿಕ ವಿರುದ್ಧದ ಪಂದ್ಯದ ಗೆಲುವಿನ ಹೀರೋ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20ಯಲ್ಲಿ 03 ಬಾರಿ ಡಕ್ ಔಟ್ ಆಗಿದ್ದಾರೆ.