04-03-2024

=ಐಪಿಎಲ್​ನ ಅತ್ಯಂತ ದುಬಾರಿ ನಾಯಕ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಪ್ರಸ್ತುತ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಪ್ಯಾಟ್ ಕಮ್ಮಿನ್ಸ್ ಅವರನ್ನು ಫ್ರಾಂಚೈಸಿ 20.5 ಕೋಟಿಗೆ ಖರೀದಿಸಿತ್ತು.

2021 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಕನ್ನಡಿಗ ರಾಹುಲ್​ಗೆ ಪ್ರತೀ ಆವೃತ್ತಿಗೆ 17 ಕೋಟಿ ರೂ. ಗಳನ್ನು ಸಂಭಾವನೆಯಾಗಿ ನೀಡಲಾಗುತ್ತಿದೆ.

2018 ರಿಂದ 2021ರ ಅವಧಿಯಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಪ್ರತಿ ಸೀಸನ್​ಗೆ 17 ಕೋಟಿ ರೂ. ಪಡೆಯುತ್ತಿದ್ದರು.

2022 ರ ಐಪಿಎಲ್​ನಲ್ಲಿ ಸಿಎಸ್‌ಕೆ ತಂಡದ ನಾಯಕರಾಗಿದ್ದ ರವೀಂದ್ರ ಜಡೇಜಾಗೆ 16 ಕೋಟಿ ರೂ. ವೇತನ ನೀಡಲಾಗುತ್ತಿತ್ತು.

2022 ಮತ್ತು 2023ರ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾಗೆ ಒಂದು ಸೀಸನ್​ಗೆ 16 ಕೋಟಿ ರೂ. ಸಂಭಾವನೆ ಸಿಗುತ್ತಿತ್ತು.

2022 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ರಿಷಬ್ ಪಂತ್ ಪ್ರತಿ ಸೀಸನ್​ಗೆ 16 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

2022 ಮತ್ತು 2023ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಒಂದು ಸೀಸನ್‌ಗೆ 16 ಕೋಟಿ ರೂ. ಪಡೆಯುತ್ತಿದ್ದರು.

2018 ರಿಂದ 2021ರ ವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಒಂದು ಸೀಸನ್‌ಗೆ 15 ಕೋಟಿ ರೂ. ಸಿಗುತ್ತಿತ್ತು.

2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ 14 ಕೋಟಿ ರೂ. ಪಡೆಯುತ್ತಿದ್ದರು.

2022 ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ 14 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.