07-02-2024

ಫ್ರೀ ಹಿಟ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್ಸ್​ ಯಾರ್ಯಾರು ಗೊತ್ತಾ?

Author: ಪೃಥ್ವಿ ಶಂಕರ

ವೆಸ್ಟ್ ಇಂಡೀಸ್ ತಂಡದ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಫ್ರೀ ಹಿಟ್ ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ.

ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಕೂಡ ತಮ್ಮ ವೃತ್ತಿಜೀವನದಲ್ಲಿ 7 ಫ್ರೀ ಹಿಟ್ ಬಾಲ್‌ಗಳನ್ನು ಸಿಕ್ಸರ್ ಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಇದುವರೆಗೆ ಫ್ರೀ ಹಿಟ್ ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ 7 ಫ್ರೀ ಹಿಟ್ ಎಸೆತಗಳನ್ನು ಸಿಕ್ಸರ್​ಗಟ್ಟಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ತಮ್ಮ ವೃತ್ತಿಜೀವನದಲ್ಲಿ 6 ಫ್ರೀ ಹಿಟ್ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದರು.

ಟೀಂ ಇಂಡಿಯಾದ ಕೆಎಲ್ ರಾಹುಲ್ ಕೂಡ ಇದುವರೆಗೆ ಫ್ರೀ ಹಿಟ್ ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 5 ಫ್ರೀ ಹಿಟ್ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ತಮ್ಮ ವೃತ್ತಿಜೀವನದಲ್ಲಿ 5 ಫ್ರೀ ಹಿಟ್ ಎಸೆತಗಳನ್ನು  ಸಿಕ್ಸರ್‌ ಬಾರಿಸಿದ್ದರು.

ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಕೂಡ 5 ಫ್ರೀ ಹಿಟ್ ಎಸೆತಗಳನ್ನು ಸಿಕ್ಸರ್‌ ಆಗಿ ಪರಿವರ್ತಿಸಿದ್ದಾರೆ.