27-05-2024

IPL: ಒಂದು ಸೀಸನ್‌ನಲ್ಲಿ ಅಧಿಕ ಸಿಕ್ಸರ್‌ ಸಿಡಿಸಿದ ಬ್ಯಾಟರ್​ಗಳಿವರು

Author: ಪೃಥ್ವಿ ಶಂಕರ

ಕ್ರಿಸ್ ಗೇಲ್ ಐಪಿಎಲ್ 2012 ರಲ್ಲಿ ಒಟ್ಟು 58 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಕೆಕೆಆರ್​ನ ಆಲ್​ರೌಂಡರ್ ಆಂಡ್ರೆ ರಸೆಲ್ 2019 ರಲ್ಲಿ 52 ಸಿಕ್ಸರ್ ಬಾರಿಸಿದ್ದರು.

ಮಾಜಿ ಆರ್​ಸಿಬಿ ಆಟಗಾರ ಕ್ರಿಸ್ ಗೇಲ್ 2013ರ ಐಪಿಎಲ್​ನಲ್ಲಿ 51 ಸಿಕ್ಸರ್ ಬಾರಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ 45 ಸಿಕ್ಸರ್‌ಗಳನ್ನು ಬಾರಿಸಿದ್ದರು.

2011ರ ಐಪಿಎಲ್‌ನಲ್ಲಿ ಆರ್​ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ 44 ಸಿಕ್ಸರ್ ಸಿಡಿಸಿದ್ದರು.

ಈ ಆವೃತ್ತಿಯಲ್ಲಿ ಅಂದರೆ ಐಪಿಎಲ್ 2024ರಲ್ಲಿ ಅಭಿಷೇಕ್ ಶರ್ಮಾ 42 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಕ್ರಿಸ್ ಗೇಲ್ 2015ರ ಐಪಿಎಲ್​ನಲ್ಲಿ ಒಟ್ಟು 38 ಸಿಕ್ಸರ್​ಗಳನ್ನು ಬಾರಿಸಿದ್ದರು.

ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ 38 ಸಿಕ್ಸರ್ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ.