07-02-2024

ಅಂಡರ್19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ಗೇರಿದ ತಂಡಗಳಿವು

Author: ಪೃಥ್ವಿ ಶಂಕರ

ಭಾರತ ತಂಡ ಇದುವರೆಗೆ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ 9 ಬಾರಿ (2000, 2006, 2008, 2012, 2016, 2018, 2022, 2020, 2024) ಫೈನಲ್ ತಲುಪಿದೆ.

ಆಸ್ಟ್ರೇಲಿಯ ತಂಡ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಐದು ಬಾರಿ (1988, 2002, 2010, 2012, 2018) ಫೈನಲ್‌ಗೆ ಕಾಲಿಟ್ಟಿದೆ.

ಪಾಕಿಸ್ತಾನ ತಂಡವು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಐದು ಬಾರಿ (1988, 2004, 2006, 2010, 2014) ಫೈನಲ್‌ ಆಡಿದೆ.

ದಕ್ಷಿಣ ಆಫ್ರಿಕಾ ತಂಡವು ಅಂಡರ್-19 ವಿಶ್ವಕಪ್‌ನಲ್ಲಿ ಮೂರು ಬಾರಿ (2002, 2008, 2014) ಫೈನಲ್‌ಗೆ ಪ್ರವೇಶಿಸಿದೆ.

ಇಂಗ್ಲೆಂಡ್ ತಂಡ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಎರಡು ಬಾರಿ (1998, 2022) ಫೈನಲ್ ಟಿಕೆಟ್ ಪಡೆದುಕೊಂಡಿದೆ.

ವೆಸ್ಟ್ ಇಂಡೀಸ್ ತಂಡ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಎರಡು ಬಾರಿ (2016, 2004) ಫೈನಲ್ ಪ್ರವೇಶಿಸಿದೆ.

ಬಾಂಗ್ಲಾದೇಶ ತಂಡ ಒಮ್ಮೆ ಅಂಡರ್-19 ವಿಶ್ವಕಪ್ (2020) ಫೈನಲ್‌ ಆಡಿದೆ.

ನ್ಯೂಜಿಲೆಂಡ್ ತಂಡವು ಒಮ್ಮೆ ಅಂಡರ್-19 ವಿಶ್ವಕಪ್‌ನಲ್ಲಿ (1998) ಫೈನಲ್‌ಗೆ ಎಂಟ್ರಿಕೊಟ್ಟಿದೆ.

ಶ್ರೀಲಂಕಾ ತಂಡವು ಒಮ್ಮೆ ಅಂಡರ್-19 ವಿಶ್ವಕಪ್‌ನಲ್ಲಿ (2000) ಫೈನಲ್‌ಗೆ ಪ್ರವೇಶಿಸಿದೆ.