10-05-2024

ಟಿ20ಯಲ್ಲಿ ಮೊದಲ 10 ಓವರ್‌ಗಳಲ್ಲಿ ಹೆಚ್ಚು ಸ್ಕೋರ್ ಮಾಡಿದ ತಂಡಗಳಿವು

Author: ಪೃಥ್ವಿ ಶಂಕರ

ಸನ್‌ರೈಸರ್ಸ್ ಹೈದರಾಬಾದ್ ಲಕ್ನೋ ವಿರುದ್ಧ 9.4 ಓವರ್‌ಗಳಲ್ಲಿ 167 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಮೊದಲ 10 ಓವರ್‌ಗಳಲ್ಲಿ ಯಾವುದೇ ತಂಡ ಮಾಡಿದ ಗರಿಷ್ಠ ಸ್ಕೋರ್ ಆಗಿದೆ.

2018 ರಲ್ಲಿ, ವೋರ್ಸೆಸ್ಟರ್‌ಶೈರ್ ತಂಡ ನಾರ್ಥಾಂಪ್ಟನ್‌ಶೈರ್ ವಿರುದ್ಧ ಮೊದಲ 10 ಓವರ್‌ಗಳಲ್ಲಿ 162 ರನ್ ಬಾರಿಸಿತ್ತು.

ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ 10 ಓವರ್‌ಗಳಲ್ಲಿ 158 ರನ್ ಸಿಡಿಸಿತ್ತು.

2019 ರಲ್ಲಿ, ಬ್ರಿಸ್ಬೇನ್ ತಂಡ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 10 ಓವರ್‌ಗಳಲ್ಲಿ 158 ರನ್ ಕಲೆಹಾಕಿತ್ತು.

2023 ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಮುಲ್ತಾನ್-ಸುಲ್ತಾನ್ ತಂಡ 10 ಓವರ್‌ಗಳಲ್ಲಿ 156 ರನ್ ಬಾರಿಸಿತ್ತು.

2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಮೊದಲ 10 ಓವರ್‌ಗಳಲ್ಲಿ 149 ರನ್ ಗಳಿಸಿತು.

ಐಪಿಎಲ್ 17ನೇ ಸೀಸನ್​ನಲ್ಲಿ ಮುಂಬೈ ವಿರುದ್ಧ ಹೈದರಾಬಾದ್ ಮೊದಲ 10 ಓವರ್​ಗಳಲ್ಲಿ 148 ರನ್ ಬಾರಿಸಿತ್ತು.

2016ರಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಮೊದಲ 10 ಓವರ್‌ಗಳಲ್ಲಿ 147 ರನ್ ಗಳಿಸಿತ್ತು.

2017 ರ ಸಿಪಿಎಲ್​ನಲ್ಲಿ ಜಮೈಕಾ ವಿರುದ್ಧ ಗಯಾನಾ ವಾರಿಯರ್ಸ್ ಮೊದಲ 10 ಓವರ್‌ಗಳಲ್ಲಿ 144 ರನ್ ಸಿಡಿಸಿತ್ತು.