IPL: ಅತಿ ಹೆಚ್ಚು ಬಾರಿ ಪ್ಲೇಆಫ್ ಆಡಿದ ತಂಡಗಳಿವು; ಆರ್ಸಿಬಿಗೆ ಎಷ್ಟನೇ ಸ್ಥಾನ?
Author: ಪೃಥ್ವಿ ಶಂಕರ
2024 ರ ಐಪಿಎಲ್ ಈಗ ಲೀಗ್ ಹಂತದ ಮುಕ್ತಾಯಕ್ಕೆ ಬಂದು ನಿಂತಿದೆ. ಕೆಲವೇ ದಿನಗಳಲ್ಲಿ ಪ್ಲೇಆಫ್ ಸುತ್ತು ಆರಂಭವಾಗಲಿದೆ.
ಇದುವರೆಗೆ ಐಪಿಎಲ್‌ನಲ್ಲಿ 16 ಆವೃತ್ತಿಗಳು ನಡೆದಿವೆ. ಇದು ಸೇರಿ 17 ಆವೃತ್ತಿಗಳಾಗುತ್ತವೆ. ಈ 17 ಆವೃತ್ತಿಗಳಲ್ಲಿ ಯಾವ ತಂಡ ಎಷ್ಟು ಬಾರಿ ಪ್ಲೇಆಫ್ ಆಡಿದೆ ಎಂಬುದನ್ನು ನೋಡುವುದಾದರೆ..
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗರಿಷ್ಠ 12 ಬಾರಿ ಐಪಿಎಲ್ ಪ್ಲೇಆಫ್ ತಲುಪಿದೆ.
ಮುಂಬೈ ಇಂಡಿಯನ್ಸ್ ತಂಡ 10 ಬಾರಿ ನಾಕೌಟ್ ಪ್ರವೇಶಿಸಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಆರ್‌ಸಿಬಿ ಇದುವರೆಗೆ ಒಮ್ಮೆಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಎಂಟು ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ 8 ಬಾರಿ (ಡೆಕ್ಕನ್ ಚಾರ್ಜಸ್ ತಂಡವನ್ನು ಸೇರಿಸಿ) ನಾಕೌಟ್ ತಲುಪುವಲ್ಲಿ ಯಶಸ್ವಿಯಾಗಿದೆ.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಏಳು ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೆ 6 ಬಾರಿ (ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸೇರಿಸಿ) ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.
ಒಮ್ಮೆ ಐಪಿಎಲ್ ಪ್ರಶಸ್ತಿ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡ ಇದುವರೆಗೆ 4 ಬಾರಿ ಪ್ಲೇಆಫ್ ಆಡಿದೆ.
ಉಳಿದಂತೆ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು ತಲಾ 2 ಬಾರಿ ಪ್ಲೇಆಫ್ ಆಡಿದೆ.