24-02-2024

ಟೆಸ್ಟ್ ಸರಣಿಯೊಂದರಲ್ಲಿ ರನ್ ಶಿಖರ ಕಟ್ಟಿದ ಭಾರತೀಯರಿವರು

Author: ಪೃಥ್ವಿ ಶಂಕರ

1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸುನಿಲ್ ಗವಾಸ್ಕರ್ 774 ರನ್ ಕಲೆಹಾಕಿದ್ದರು.

1979 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 6 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸುನಿಲ್ ಗವಾಸ್ಕರ್ 732 ರನ್ ಗಳಿಸಿದ್ದರು.

ವಿರಾಟ್ ಕೊಹ್ಲಿ 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 692 ರನ್ ಸಿಡಿಸಿದ್ದರು.

ವಿರಾಟ್ ಕೊಹ್ಲಿ 2016 ರಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 655 ರನ್ ಗಳಿಸಿದ್ದರು.

ದಿಲೀಪ್ ಸರ್ದೇಸಾಯಿ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 642 ರನ್ ಬಾರಿಸಿದ್ದರು.

2003ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ 619 ರನ್ ಕಲೆಹಾಕಿದ್ದರು.

ಇದೀಗ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದುವರೆಗೆ 618 ರನ್ ಗಳಿಸಿದ್ದಾರೆ.