22-02-2024

ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಭಾರತ ವಿರುದ್ಧ 52 ಟೆಸ್ಟ್ ಇನ್ನಿಂಗ್ಸ್ ಆಡಿರುವ ಜೋ ರೂಟ್ ಇದುವರೆಗೆ ಅತ್ಯಧಿಕ 10 ಶತಕಗಳನ್ನು ಸಿಡಿಸಿದ್ದಾರೆ.

ಸ್ಟೀವ್ ಸ್ಮಿತ್ ಭಾರತ ವಿರುದ್ಧ 37 ಟೆಸ್ಟ್ ಇನ್ನಿಂಗ್ಸ್ ಆಡಿದ್ದು, ಇದುವರೆಗೆ 9 ಶತಕಗಳನ್ನು ಬಾರಿಸಿದ್ದಾರೆ.

ಗ್ಯಾರಿ ಸೋಬರ್ಸ್ ಭಾರತದ ವಿರುದ್ಧ 30 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 8 ಶತಕಗಳನ್ನು ಸಿಡಿಸಿದ್ದಾರೆ.

ವಿವಿಯನ್ ರಿಚರ್ಡ್ಸ್ ಭಾರತದ ವಿರುದ್ಧ 41 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ.

ಭಾರತದ ವಿರುದ್ಧ 51 ಟೆಸ್ಟ್ ಇನ್ನಿಂಗ್ಸ್​ಗಳನ್ನಾಡಿರುವ ರಿಕಿ ಪಾಂಟಿಂಗ್ 8 ಶತಕಗಳನ್ನು ಸಿಡಿಸಿದ್ದಾರೆ.

ಎವರ್ಟನ್ ವೀಕ್ಸ್ ಭಾರತದ ವಿರುದ್ಧ 15 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 7 ಶತಕಗಳನ್ನು ಗಳಿಸಿದ್ದಾರೆ.

ಜಾಕ್ವೆಸ್ ಕಾಲಿಸ್ ಭಾರತದ ವಿರುದ್ಧ ಆಡಿರುವ 31 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.

ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.

ಶಿವನಾರಾಯಣ್ ಚಂದ್ರಪಾಲ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.

ಕ್ಲೈವ್ ಲಾಯ್ಡ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಶತಕಗಳನ್ನು ಗಳಿಸಿದ್ದಾರೆ.