ಇಂದು ಫರ್ಗುಸನ್ ಕಣಕ್ಕೆ: PBKS ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ XI

25-03-2024

ಇಂದು ಫರ್ಗುಸನ್ ಕಣಕ್ಕೆ: PBKS ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ XI

Author: Vinay Bhat

TV9 Kannada Logo For Webstory First Slide

ಫಾಫ್ ಡುಪ್ಲೆಸಿಸ್

ಐಪಿಎಲ್ 2024 ರಲ್ಲಿ ಫಾಫ್ ಡುಪ್ಲೆಸಿಸ್ ಆರ್‌ಸಿಬಿಯನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಇವರು ಓಪನರ್ ಆಗಿ ವೈಫಲ್ಯ ಅನುಭವಿಸಿದ್ದರು.

ವಿರಾಟ್ ಕೊಹ್ಲಿ

ಎರಡು ತಿಂಗಳ ಅಂತರದ ಬಳಿಕ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಸಿಎಸ್​ಕೆ ವಿರುದ್ಧ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದ್ದರು. ಇಂದು ಇವರ ಮೇಲೆ ನಿರೀಕ್ಷೆ ಇವೆ.

ರಜತ್ ಪಾಟಿದರ್

ಇಂಜುರಿಯ ಕಾರಣ ಐಪಿಎಲ್ 2023 ರ ನಂತರ, ರಜತ್ ಪಾಟಿದಾರ್ ಈ ಬಾರಿ ಆಡಲು ಫಿಟ್ ಆಗಿದ್ದಾರೆ. ಆರ್​ಸಿಬಿಗಾಗಿ ಇವರು ನಂ. 3 ರಲ್ಲಿ ಬ್ಯಾಟ್ ಮಾಡುತ್ತಾರೆ.

ಕ್ಯಾಮರೂನ್ ಗ್ರೀನ್

ಮಂಬೈ ಇಂಡಿಯನ್ಸ್​ನಿಂದ 17.50 ಕೋಟಿ ರೂ. ಗೆ ಖರೀದಿಸಿದ ಕ್ಯಾಮರೂನ್ ಗ್ರೀನ್‌ ಮೇಲೆ ಸಾಕಷ್ಟು ಭರವಸೆ ಇಡಲಾಗಿದೆ. ಈ ಆಲ್ರೌಂಡರ್ ನಂ. 4ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಆರ್‌ಸಿಬಿಗೆ ಪ್ರಮುಖ ಆಟಗಾರನಾಗಲಿದ್ದಾರೆ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ ಐಪಿಎಲ್ 2024 ರಲ್ಲಿ RCB ಗಾಗಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುತ್ತಾರೆ. ಇದು ಇವರ ಕೊನೆಯ ಐಪಿಎಲ್ ಎಂದುಕೂಡ ಹೇಳಲಾಗಿದೆ.

ಅನುಜ್ ರಾವತ್

ಆರ್​ಸಿಬಿಗೆ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ನಲ್ಲಿ ಅನುಜ್ ರಾವತ್ ಇದ್ದಾರೆ. ಅಂತೆಯೆ ಕರ್ಣ್ ಶರ್ಮಾ ಐಪಿಎಲ್ 2024 ರಲ್ಲಿ RCB ಗೆ ಮೊದಲ ಆಯ್ಕೆಯ ಸ್ಪಿನ್ನರ್.

ಮೊಹಮ್ಮದ್ ಸಿರಾಜ್

ಐಪಿಎಲ್ 2024 ರಲ್ಲಿ ಮೊಹಮ್ಮದ್ ಸಿರಾಜ್ RCB ಯ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇವರಿಗೆ ಮಯಾಂಕ್ ದಗಾರ್ ಸಾಥ್ ನೀಡಲಿದ್ದಾರೆ.

ಲೂಕಿ ಫರ್ಗುಸನ್

ವಿದೇಶಿ ವೇಗಿಯಾಗಿ ಅಲ್ಜರಿ ಜೋಸೆಫ್ ದುಬಾರಿ ಆದ ಕಾರಣ ಲೂಕಿ ಫರ್ಗುಸನ್ ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ.