20-06-2024

8 ಕೋಟಿ ಮೌಲ್ಯದ ಕಾರು ಎಲ್ಲಿಂದ ಬಂತು? ಬಾಬರ್ ಆಝಂ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!

Author: ಪೃಥ್ವಿ ಶಂಕರ

ಪಾಕಿಸ್ತಾನ ತಂಡ ಈಗಾಗಲೇ ಟಿ20 ವಿಶ್ವಕಪ್‌ನಿಂದ ಮೊದಲ ಸುತ್ತಿನಲ್ಲಿಯೇ ಹೊರಗುಳಿದಿದ್ದು, ಇದೀಗ ತಂಡದ ನಾಯಕನ ವಿರುದ್ಧ ದೊಡ್ಡ ಆರೋಪ ಮಾಡಲಾಗಿದೆ.

ಪಾಕಿಸ್ತಾನದ ಖ್ಯಾತ ಯೂಟ್ಯೂಬರ್, ಪಾಕ್ ತಂಡದ ನಾಯಕ ಬಾಬರ್ ಆಝಂ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.

ಇತ್ತೀಚೆಗಷ್ಟೇ ಬಾಬರ್ ಆಝಂ ದುಬಾರಿ ಕಾರನ್ನು ಖರೀದಿಸಿದ್ದು, 8 ಕೋಟಿ ಮೌಲ್ಯದ ಈ ಕಾರು ಎಲ್ಲಿಂದ ಬಂತು ಎಂದು ಯೂಟ್ಯೂಬರ್ ಕೇಳಿದ್ದಾರೆ.

ಅಮೇರಿಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಸೋತರೆ ಖಂಡಿತವಾಗಿಯೂ ಕಾರು ಬರುತ್ತದೆ ಎಂದು ಯೂಟ್ಯೂಬರ್ ಲೇವಡಿ ಮಾಡಿದ್ದಾರೆ.

ಬಾಬರ್ ದುಬೈನಲ್ಲಿ ಫ್ಲಾಟ್ ಮತ್ತು ಅಮೆರಿಕದಲ್ಲಿ ಪ್ಲಾಟ್ ಅನ್ನು ಫಿಕ್ಸಿಂಗ್ ಮಾಡಿದ ಹಣದಿಂದ ಖರೀದಿಸಿದ್ದಾನೆ ಎಂದು ಯೂಟ್ಯೂಬರ್ ಆರೋಪಿಸಿದ್ದಾರೆ.

ಪಾಕಿಸ್ತಾನದ ಕ್ರೀಡಾ ಪತ್ರಕರ್ತರು ಬಾಬರ್ ವಿರುದ್ಧದ ಈ ಆರೋಪಗಳನ್ನು ನಿರಾಧಾರ ಎಂದು ಕರೆಯುತ್ತಿದ್ದಾರೆ. ಈ ಯೂಟ್ಯೂಬರ್‌ಗಳ ವಿರುದ್ಧ ಪಿಸಿಬಿ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ.