ಸೆಮೀಸ್​ಗು ಮುನ್ನ ಭಾರತಕ್ಕೆ ಶಾಕ್: ಮತ್ತೊಬ್ಬ ಆಟಗಾರ ಇಂಜುರಿ

13 November 2023

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ 160 ರನ್'ಗಳ ಭರ್ಜರಿ ಜಯ ಸಾಧಿಸಿತು.

ಭಾರತ-ನೆದರ್ಲೆಂಡ್ಸ್

ಗೆಲುವಿನ ನಡುವೆ ಭಾರತಕ್ಕೆ ಸೆಮಿ ಫೈನಲ್'ಗು ಮುನ್ನ ಆಘಾತ ಉಂಟಾಗಿದೆ. ತಂಡದ ಸ್ಟಾರ್ ವೇಗಿ ಪಂದ್ಯದ ನಡುವೆ ಇಂಜುರಿಗೆ ತುತ್ತಾಗಿದ್ದಾರೆ.

ಭಾರತಕ್ಕೆ ಶಾಕ್

ನೆದರ್ಲೆಂಡ್ಸ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕ್ಯಾಚ್ ಹಿಡಿಯುವಾಗ ಗಾಯಗೊಂಡರು.

ಮೊಹಮ್ಮದ್ ಸಿರಾಜ್

ಕುಲ್ದೀಪ್ ಬೌಲಿಂಗ್'ನಲ್ಲಿ ನೆದರ್‌ಲ್ಯಾಂಡ್‌ನ ಬ್ಯಾಟ್ಸ್‌ಮನ್‌ನ ಕ್ಯಾಚ್ ಅನ್ನು ಸಿರಾಜ್ ಹಿಡಿದುಕೊಳ್ಳಲು ಪ್ರಯತ್ನಿಸುವಾಗ ಚೆಂಡು ಅವರ ಕುತ್ತಿಗೆಗೆ ಬಡಿದಿದೆ.

ಕುತ್ತಿಗೆಗೆ ಗಾಯ

ಗಾಯದ ನಂತರ ಸಿರಾಜ್ ಅವರನ್ನು ಮೈದಾನದಿಂದ ಹೊರ ಕರೆದುಕೊಂಡು ಹೋಗಲಾಯಿತು. ಚಿಕಿತ್ಸೆ ಬಳಿಕ ಮೈದಾನಕ್ಕೆ ಮರಳಿದರೂ ಫಿಟ್ ಆದಂತೆ ಕಾಣುತ್ತಿರಲಿಲ್ಲ.

ಮೈದಾನದಿಂದ ಹೊರಕ್ಕೆ

ಸಿರಾಜ್ ಗಾಯದ ಪ್ರಮಾಣ ದೊಡ್ಡದಿದೆಯೆ ಎಂಬುದು ತಿಳಿದುಬಂದಿಲ್ಲ. 15 ರಂದು ನ್ಯೂಝಿಲೆಂಡ್ ವಿರುದ್ಧದ ಸೆಮೀಸ್ ನಲ್ಲಿ ಆಡುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.

ಸೆಮೀಸ್​ಗೆ ಅಲಭ್ಯ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಯ್ಯರ್-ರಾಹುಲ್ ಶತಕ, ಕೊಹ್ಲಿ, ರೋಹಿತ್, ಗಿಲ್ ಅರ್ಧಶತಕದ ನೆರವಿನಿಂದ 410 ರನ್ ಸಿಡಿಸಿತು.

ಭಾರತ 410 ರನ್

ನೆದರ್ಲೆಂಡ್ಸ್ ತಂಡ 250 ರನ್'ಗಳಿಗೆ ಆಲೌಟ್ ಆಯಿತು. ಭಾರತ ಪರ ಬುಮ್ರಾ, ಸಿರಾಜ್, ಕುಲ್ದೀಪ್, ಜಡೇಜಾ 2 ವಿಕೆಟ್ ಪಡೆದುಕೊಂಡರು.

250ಕ್ಕೆ ಆಲೌಟ್

ಸೆಮಿಫೈನಲ್ ಆಡದೆ ಭಾರತ ನೇರವಾಗಿ ಫೈನಲ್'ಗೆ: ಇದು ಹೇಗೆ ಗೊತ್ತೇ?