ಸೆಮಿಫೈನಲ್ ಆಡದೆ ಭಾರತ ನೇರವಾಗಿ ಫೈನಲ್‌ಗೆ: ಇದು ಹೇಗೆ ಗೊತ್ತೇ?
12-November-2023
ಐಸಿಸಿ ಏಕದಿನ ವಿಶ್ವಕಪ್-2023 ಸೆಮಿಫೈನಲ್‌ನ 4 ತಂಡಗಳನ್ನು ನಿರ್ಧರಿಸಲಾಗಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 4ರ ಘಟ್ಟಕ್ಕೆ ತಲುಪಿದೆ.
ನಾಲ್ಕು ತಂಡಗಳು
ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ನ. 15 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿ ಭಾರತ-ನ್ಯೂಜಿಲೆಂಡ್ ಸೆಣೆಸಾಡಲಿದೆ.
ಮೊದಲ ಸೆಮಿಫೈನಲ್
ಎರಡನೇ ಸೆಮಿಫೈನಲ್ ಪಂದ್ಯ ನ. 16 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಇಲ್ಲಿ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಎರಡನೇ ಸೆಮಿಫೈನಲ್
ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಿಸಲಾಗಿದೆ. ಪಂದ್ಯದ ದಿನದಂದು ಮಳೆ ಬಂದು ನಿಗದಿತ ಓವರ್ ಆಡಿಸಲು ಆಗದಿದ್ದರೆ, ಮೀಸಲು ದಿನದಂದು ಮುಂದುವರೆಯುತ್ತದೆ.
ಮೀಸಲು ದಿನ
ಮಳೆಯಿಂದಾಗಿ ಮೀಸಲು ದಿನ ಕೂಡ ಪಂದ್ಯ ನಡೆಯದಿದ್ದರೆ, ರದ್ದುಗೊಳಿಸಲಾಗುತ್ತದೆ. ಹೀಗಾದಾಗ ಅಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಹೊಂದಿರುವ ತಂಡ ಫೈನಲ್ ತಲುಪುತ್ತದೆ.
ಫೈನಲ್‌ಗೆ ಯಾವ ತಂಡ?
ನ. 15 ರಂದು ಮತ್ತು ರಿಸರ್ವ್ ದಿನದಂದು ಭಾರತ-ನ್ಯೂಝಿಲೆಂಡ್ ಪಂದ್ಯ ಪೂರ್ಣಗೊಳ್ಳದೆ ರದ್ದಾದರೆ ಟೀಮ್ ಇಂಡಿಯಾ ಫೈನಲ್‌ಗೆ ಟಿಕೆಟ್ ಪಡೆಯಲಿದೆ.
ಭಾರತ ಫೈನಲ್‌ಗೆ
ಆಸ್ಟ್ರೇಲಿಯ-ಆಫ್ರಿಕಾ ನಡುವಿನ ಪಂದ್ಯ ಕೂಡ ಮಳೆ ಸುರಿದು ಪೂರ್ಣಗೊಳ್ಳದಿದ್ದರೆ ಹೆಚ್ಚು ಅಂಕ ಹೊಂದಿರುವ ದಕ್ಷಿಣ ಆಫ್ರಿಕಾ ಫೈನಲ್ ತಲುಪಲಿದೆ.
ಆಫ್ರಿಕಾಕ್ಕೂ ಅವಕಾಶ
ಅಂಕ ಪಟ್ಟಿಯಲ್ಲಿ ಭಾರತ ನಂತರ ಆಫ್ರಿಕಾ 2ನೇ ಸ್ಥಾನದಲ್ಲಿದೆ. ಅವರು 14 ಅಂಕಹೊಂದಿದ್ದಾರೆ. ಆಸೀಸ್ ಕೂಡ ಅಷ್ಟೇ ಅಂಕ ಹೊಂದಿದೆ. ಆದರೆ ಅಫ್ರಿಕಾ ರನ್ರೇಟ್ನಲ್ಲಿ ಮುಂದಿದೆ.
ರನ್ರೇಟ್
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಜ್ಜಾಗ ಕಿಂಗ್ ಕೊಹ್ಲಿ
ಇನ್ನಷ್ಟು ಓದಿ