12-11-2023

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಜ್ಜಾದ ಕಿಂಗ್ ಕೊಹ್ಲಿ

ಭಾರತ-ನೆದರ್ಲೆಂಡ್ಸ್

ಭಾರತವು ಏಕದಿನ ವಿಶ್ವಕಪ್-2023 ರಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ.

ಕೊಹ್ಲಿ ಮೇಲೆ ಕಣ್ಣು

ಈ ಪಂದ್ಯದಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲಿದೆ. ಯಾಕೆಂದರೆ ಐಪಿಎಲ್‌ನಲ್ಲಿ ಇವರು ಆರ್‌ಸಿಬಿ ಪರ ಆಡುತ್ತಾರೆ. ಹೀಗಾಗಿ ಕೊಹ್ಲಿಗೆ ಇದು ಎರಡನೇ ಮನೆ ಎನ್ನುತ್ತಾರೆ.

ಸಚಿನ್ ದಾಖಲೆ ಉಡೀಸ್

ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಮುರಿಯುವ ಅವಕಾಶ ಕೊಹ್ಲಿಗಿದೆ. ಈ ಮೂಲಕ ಒಂದೇ ಪಂದ್ಯದಲ್ಲಿ 2 ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಗರಿಷ್ಠ ಶತಕ

ಸಚಿನ್-ಕೊಹ್ಲಿ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿ (49 ಶತಕ) ಸಮಬಲ ಸಾಧಿಸಿದ್ದಾರೆ. ಕೊಹ್ಲಿ ಇಂದು ಶತಕ ಬಾರಿಸಿದರೆ, ಏಕದಿನದಲ್ಲಿ 50 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎನಿಸಿಕೊಳ್ಳಲಿದ್ದಾರೆ.

ವಿಶ್ವದಾಖಲೆ

ಅಂತೆಯೆ ಈ ವಿಶ್ವಕಪ್‌ನಲ್ಲಿ ಕೊಹ್ಲಿ ಇದುವರೆಗೆ 8 ಪಂದ್ಯಗಳಲ್ಲಿ 543 ರನ್ ಗಳಿಸಿದ್ದಾರೆ. ಕೊಹ್ಲಿ ಇಂದು 130 ರನ್ ಗಳಿಸಿದರೆ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಲಿದ್ದಾರೆ.

ಸಚಿನ್ 673 ರನ್

ಸಚಿನ್ ಏಕದಿನ ವಿಶ್ವಕಪ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು 673 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2003 ರಲ್ಲಿ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಇವರು 11 ಪಂದ್ಯಗಳಲ್ಲಿ 1 ಶತಕ, 6 ಅರ್ಧಶತಕಗಳ ಸಿಡಿಸಿದ್ದರು.

ಬೆಂಗಳೂರಿನಲ್ಲಿ ರನ್ ಮಳೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹೇಗಿದ್ದರೂ ರನ್‌ ಮಳೆಗೆ ಹೆಸರಾಗಿದೆ. ಅಲ್ಲದೆ ಕೊಹ್ಲಿಗೆ ಇಲ್ಲಿನ ಪಿಚ್ ವರ್ಮ ತಿಳಿದಿದ್ದು, ಸಚಿನ್ ಅವರ ಎರಡೂ ದಾಖಲೆಗಳನ್ನು ಮುರಿದರೆ ಆಶ್ಚರ್ಯವಿಲ್ಲ.

ರೋಹಿತ್ ದಾಖಲೆ

ರೋಹಿತ್ ಇಂದು 5 ಸಿಕ್ಸರ್‌ಗಳನ್ನು ಬಾರಿಸಿದರೆ, ಕ್ರಿಸ್ ಗೇಲ್ ಅವರ ದಾಖಲೆ ಮುರಿದು ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಭಾರತ ತೊರೆಯುವ ಮುನ್ನ ಮಾಲ್ ಗೆ ತೆರಳಿ ಸೀರೆ ಖರೀದಿಸಿದ ಬಾಬರ್