03-12-2023

ಪ್ರತಿ ಐಪಿಎಲ್ ಹರಾಜಿನಲ್ಲಿ ಅಧಿಕ ಬೆಲೆ ಪಡೆದ ಕ್ರಿಕೆಟಿಗರು ಯರ್ಯಾರು ಗೊತ್ತಾ?

Author: ಪೃಥ್ವಿ ಶಂಕರ

2008 ರ ಐಪಿಎಲ್ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ರೂ 9.5 ಕೋಟಿಗೆ ಖರೀದಿಸಿತ್ತು.

2009 ರ ಐಪಿಎಲ್ ಹರಾಜಿನಲ್ಲಿ ಕೆವಿನ್ ಪೀಟರ್ಸನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 9.8 ಕೋಟಿಗೆ ಖರೀದಿಸಿತ್ತು.

ಐಪಿಎಲ್ 2009 ರ ಹರಾಜಿನಲ್ಲಿ, ಆಂಡ್ರ್ಯೂ ಫ್ಲಿಂಟಾಫ್ ಅವರನ್ನು 9.8 ಕೋಟಿ ರೂ.ಗೆ ಸಿಎಸ್​​ಕೆ ಖರೀದಿಸಿತ್ತು.

2010 ರ ಐಪಿಎಲ್ ಹರಾಜಿನಲ್ಲಿ ಕೀರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ 4.8 ಕೋಟಿಗೆ ಖರೀದಿಸಿತ್ತು.

ಶೇನ್ ಬಾಂಡ್ ಅವರನ್ನು 2010 ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 4.8 ಕೋಟಿ ರೂಪಾಯಿಗೆ ಖರೀದಿಸಿತ್ತು.

2011ರ ಐಪಿಎಲ್ ಹರಾಜಿನಲ್ಲಿ ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 14.9 ಕೋಟಿ ರೂ.ಗೆ ಖರೀದಿಸಿತ್ತು.

2012ರ ಐಪಿಎಲ್ ಹರಾಜಿನಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 12.8 ಕೋಟಿ ರೂ.ಗೆ ಖರೀದಿಸಿತ್ತು.

2013ರ ಐಪಿಎಲ್ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮುಂಬೈ ಇಂಡಿಯನ್ಸ್ 6.3 ಕೋಟಿ ರೂ.ಗೆ ಖರೀದಿಸಿತ್ತು.

2014 ರ ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ಆರ್​ಸಿಬಿ 14 ಕೋಟಿಗೆ ಖರೀದಿಸಿತ್ತು.

2015ರ ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ 15 ಕೋಟಿ ರೂ.ಗೆ ಖರೀದಿಸಿತ್ತು.

2016ರ ಐಪಿಎಲ್ ಹರಾಜಿನಲ್ಲಿ ಶೇನ್ ವ್ಯಾಟ್ಸನ್ ಅವರನ್ನು ಆರ್‌ಸಿಬಿ 9.5 ಕೋಟಿ ರೂ.ಗೆ ಖರೀದಿಸಿತ್ತು.

2017ರ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ 14.5 ಕೋಟಿ ರೂ.ಗೆ ಖರೀದಿಸಿತ್ತು.

2018ರ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರಾಜಸ್ಥಾನ ರಾಯಲ್ಸ್ 12.5 ಕೋಟಿ ರೂ.ಗೆ ಖರೀದಿಸಿತ್ತು.

2019 ರ ಐಪಿಎಲ್ ಹರಾಜಿನಲ್ಲಿ ಜಯದೇವ್ ಉನಾದ್ಕಟ್ ಅವರನ್ನು ರಾಜಸ್ಥಾನ್ ರಾಯಲ್ಸ್ 8.4 ಕೋಟಿಗೆ ಖರೀದಿಸಿತ್ತು.

2020ರ ಐಪಿಎಲ್ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಕೆಕೆಆರ್ ತಂಡ 15.5 ಕೋಟಿ ರೂ.ಗೆ ಖರೀದಿಸಿತ್ತು.

2021ರ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ 16.25 ಕೋಟಿ ರೂ.ಗೆ ಖರೀದಿಸಿತ್ತು.

2022ರ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಖರೀದಿಸಿತ್ತು.

2023ರ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿ ರೂ.ಗೆ ಖರೀದಿಸಿತ್ತು.