13-02-2024

ಭಾರತಕ್ಕೆ ಮತ್ತೊಂದು ಶಾಕ್: ಮತ್ತೊಬ್ಬ ಸ್ಟಾರ್ ತಂಡದಿಂದ ಔಟ್

Author: Vinay Bhat

ಭಾರತ-ಇಂಗ್ಲೆಂಡ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ರಾಜ್ಕೋಟ್'ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

4ಬದಲಾವಣೆ

ಈ ಪಂದ್ಯಕ್ಕೆ ಟೀಮ್ ಇಂಡಿಯಾ ನಾಲ್ಕು ಮಹತ್ವದ ಬದಲಾವಣೆ ಮಾಡಲಾಗಿದೆ. ಸರ್ಫರಾಜ್ ಖಾನ್ ಮತ್ತು ದ್ರುವ್ ಜುರೆಲ್ ಪದಾರ್ಪಣೆ ಮಾಡಿದ್ದಾರೆ.

ಜಡೇಜಾ-ಸಿರಾಜ್

ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಕಮ್​ಬ್ಯಾಕ್ ಮಾಡಿದ್ದಾರೆ. ಅಕ್ಷರ್ ಪಟೇಲ್-ಮುಖೇಶ್ ಕುಮಾರ್ ಹೊರಬಿದ್ದಿದ್ದಾರೆ.

ಮುಖೇಶ್ ಕುಮಾರ್

ಮುಖೇಶ್ ಕುಮಾರ್ ಅವರು ಇಡೀ ಪಂದ್ಯದಿಂದಲೇ ಹೊರಗುಳಿದಿದ್ದಾರೆ. ಇವರನ್ನು ಸ್ಕ್ಯಾಡ್​ನಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಕಳಪೆ ಪ್ರದರ್ಶನ

ಭಾರತ ಪರ ಅಷ್ಟೇನು ಉತ್ತಮ ಪ್ರದರ್ಶನ ತೋರದ ಮುಖೇಶ್ ಮುಂದಿನ ರಣಜಿ ಟ್ರೋಫಿ ಪಂದ್ಯಕ್ಕಾಗಿ ಬಂಗಾಳ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದುಬಾರಿ ಬೌಲರ್

ಎರಡನೇ ಟೆಸ್ಟ್​ನಲ್ಲಿ ಮಾಡಿದ 7 ಓವರ್​ಗಳಲ್ಲಿ ಮುಖೇಶ್ 44 ರನ್ ನೀಡಿದ್ದರು. ಅಲ್ಲದೆ ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ  ಪ್ಲೇಯಿಂಗ್ XI

ರೋಹಿತ್ ಶರ್ಮಾ, ಜೈಸ್ವಾಲ್, ಗಿಲ್, ರಜತ್ ಪಟಿದಾರ್, ಸರ್ಫರಾಜ್, ಜಡೇಜಾ, ದ್ರುವ್ ಜುರೆಲ್, ಆರ್. ಅಶ್ವಿನ್, ಕುಲ್ದೀಪ್, ಬುಮ್ರಾ, ಸಿರಾಜ್.