ಕೊಹ್ಲಿ ಅಲ್ಲ: ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ಇವರೇ ನೋಡಿ

17-February-2024

Author: Vinay Bhat

ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು 374 ಟಿ20 ಪಂದ್ಯಗಳನ್ನು ಆಡಿದ್ದು, 11,965 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

ಟಿ20ಐ ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಭಾರತದ ಪರ 115 ಪಂದ್ಯಗಳಲ್ಲಿ ಒಟ್ಟು 4008 ರನ್ ಗಳಿಸಿದ್ದಾರೆ.

4008 ರನ್

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 237 ಐಪಿಎಲ್ ಪಂದ್ಯಗಳಲ್ಲಿ 7263 ರನ್ ಗಳಿಸಿದ್ದಾರೆ.

7263 ರನ್

ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಸ್ವರೂಪದಲ್ಲಿ ಹೆಚ್ಚು ರನ್ ಗಳಿಸಿದ ಮೂವರು ಆಟಗಾರರು ಯಾರು ನೋಡಿ.

ಕೊಹ್ಲಿ 4ನೇ ಸ್ಥಾನ

ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕ್ರಿಸ್ ಗೇಲ್ ಹೊಂದಿದ್ದಾರೆ. ಇವರು 463 T20 ಪಂದ್ಯಗಳಲ್ಲಿ, 14,562 ರನ್ ಗಳಿಸಿದ್ದಾರೆ.

ಕ್ರಿಸ್ ಗೇಲ್

ವಿರಾಟ್‌ಗಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಕೂಡ ಇದ್ದಾರೆ.

ಶೋಯೆಬ್ ಮಲಿಕ್

ಪಾಕಿಸ್ತಾನದ ಮಾಜಿ ನಾಯಕ ಮಲಿಕ್ ಇದುವರೆಗೆ 525 ಟಿ20 ಪಂದ್ಯಗಳಲ್ಲಿ 12,993 ರನ್ ಗಳಿಸಿದ್ದಾರೆ.

12,993 ರನ್

ವೆಸ್ಟ್‌ಇಂಡೀಸ್‌ನ ಪೊಲಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ. ಜನವರಿ 12, 2024 ರವರೆಗೆ ಇವರು 638 ಟಿ20 ಪಂದ್ಯಗಳಲ್ಲಿ 12,421 ರನ್ ಗಳಿಸಿದ್ದಾರೆ.

ಕೀರಾನ್ ಪೊಲಾರ್ಡ್