ಕೊಹ್ಲಿ-ರೋಹಿತ್ ಅಲ್ಲ: ವಿಶ್ವಕಪ್ 2023 ರಲ್ಲಿ ಗರಿಷ್ಠ ರನ್ ಗಳಿಸಿದ್ದು ಇವರೇ ನೋಡಿ
10-November-2023
565 ರನ್'ಗಳನ್ನು ಗಳಿಸಿರುವ ನ್ಯೂಝಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ 2023 ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಚಿನ್ ರವೀಂದ್ರ: 565 ರನ್
ರವೀಂದ್ರ ಒಟ್ಟು 9 ಇನ್ನಿಂಗ್ಸ್‌ಗಳಲ್ಲಿ 70.62 ಸರಾಸರಿಯಲ್ಲಿ 565 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಮೂರು ಶತಕ ಮತ್ತು ಎರಡು ಅರ್ಧ ಶತಕ ಬಾರಿಸಿದ್ದಾರೆ.
ರಚಿನ್ ರವೀಂದ್ರ
550 ರನ್ ಕಲೆಹಾಕಿದುರವ ಆಫ್ರಿಕಾ ಬ್ಯಾಟರ್ ಕ್ವಿಂಟನ್ ಡಿಕಾಕ್ 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಡಿಕಾಕ್: 550 ರನ್
ಡಿಕಾಲ್ ಎಂಟು ಇನ್ನಿಂಗ್ಸ್‌ಗಳಲ್ಲಿ 68.75 ಸರಾಸರಿಯಲ್ಲಿ 550 ರನ್ ಗಳಿಸಿದ್ದಾರೆ. ಇದರಲ್ಲಿ ಬರೋಬ್ಬರಿ ನಾಲ್ಕು ಶತಕಗಳನ್ನು ಹೊಡೆದಿದ್ದಾರೆ.
4 ಶತಕ
543 ರನ್ಗಳನ್ನು ಬಾರಿಸಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ: 543 ರನ್
ಕೊಹ್ಲಿ ಎಂಟು ಇನ್ನಿಂಗ್ಸ್‌ಗಳಲ್ಲಿ 108.6 ಸರಾಸರಿಯಲ್ಲಿ 543 ರನ್ ಗಳಿಸಿದ್ದಾರೆ. ಕೊಹ್ಲಿ ಬ್ಯಾಟ್ನಿಂದ ಎರಡು ಶತಕ ಮತ್ತು ನಾಲ್ಕು ಅರ್ಧ ಶತಕ ಬಂದಿದೆ.
ವಿರಾಟ್ ಕೊಹ್ಲಿ
446 ರನ್ ಗಳಿಸಿರುವ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ವಾರ್ನರ್: 446 ರನ್
ವಾರ್ನರ್ ಎಂಟು ಇನ್ನಿಂಗ್ಸ್‌ಗಳಲ್ಲಿ 55.75 ಸರಾಸರಿಯಲ್ಲಿ 446 ರನ್ ಗಳಿಸಿದ್ದಾರೆ. ಎರಡು ಶತಕಗಳು ಮತ್ತು ಒಂದು ಅರ್ಧ ಶತಕವನ್ನು ಬಾರಿಸಿದ್ದಾರೆ.
ಡೇವಿಡ್ ವಾರ್ನರ್
442 ರನ್ ಗಳಿಸಿರುವ ರೋಹಿತ್ 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ರೋಹಿತ್: 442 ರನ್
ಹಿಟ್'ಮ್ಯಾನ್ ಒಟ್ಟು ಎಂಟು ಇನ್ನಿಂಗ್ಸ್‌ಗಳಲ್ಲಿ 55.25 ಸರಾಸರಿ ಮತ್ತು 122.77 ಸ್ಟ್ರೈಕ್ ರೇಟ್‌ನಲ್ಲಿ 442 ರನ್ ಗಳಿಸಿದ್ದಾರೆ. 1 ಶತಕ ಮತ್ತು ಎರಡು ಅರ್ಧ ಶತಕ ಸಿಡಿಸಿದ್ದಾರೆ.
ರೋಹಿತ್ ಶರ್ಮಾ
ಸೆಮೀಸ್'ಗೆ ಹತ್ತಿರವಾದ ಕಿವೀಸ್: ಇಲ್ಲಿದೆ ವಿಶ್ವಕಪ್ ಪಾಯಿಂಟ್ಸ್ ಟೇಬಲ್
ಇನ್ನಷ್ಟು ಓದಿ