20-01-2024
ಟಿ20I ಶತಕ ಸಿಡಿಸಿದ 3 ಪಾಕಿಸ್ತಾನ ಬ್ಯಾಟರ್'ಗಳು ಯಾರು ಗೊತ್ತೇ?
Author: Vinay Bhat
ಅಹ್ಮದ್ ಶಹಜಾದ್
ಅಹ್ಮದ್ ಶಹಜಾದ್ ಅಂತರರಾಷ್ಟ್ರೀಯ ಟ್ವೆಂಟಿ-20ಯಲ್ಲಿ 100 ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟರ್ ಆಗಿದ್ದಾರೆ.
111* ರನ್
ಮಾರ್ಚ್ 30, 2014 ರಂದು ಮಿರ್‌ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಅಹ್ಮದ್ ಶಹಜಾದ್ 62 ಎಸೆತಗಳಲ್ಲಿ 111 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊಹಮ್ಮದ್ ರಿಜ್ವಾನ್
ಮೊಹಮ್ಮದ್ ರಿಜ್ವಾನ್ ಟಿ20ಯಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಎರಡನೇ ಬ್ಯಾಟರ್. 2021 ರಂದು ಲಾಹೋರ್‌ನಲ್ಲಿ ನಡೆದ ಆಫ್ರಿಕಾ ವಿರುದ್ಧ 64 ಎಸೆತಗಳಲ್ಲಿ 104 ರನ್ ಗಳಿಸಿದರು.
ಬಾಬರ್ ಆಜಮ್
ಬಾಬರ್ ಅಜಮ್ ಪಾಕಿಸ್ತಾನದ ಪರವಾಗಿ T20I ಶತಕ ಗಳಿಸಿದ ಮೂರನೇ ಮತ್ತು ಕೊನೆಯ ಬ್ಯಾಟರ್.
ಮೂರು ಶತಕ
ಬಾಬರ್ ಇದುವರೆಗೆ 108 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನಕ್ಕಾಗಿ ಮೂರು T20I ಶತಕಗಳನ್ನು ಗಳಿಸಿದ್ದಾರೆ.
2021 ರಲ್ಲಿ
2021 ರಂದು ಸೆಂಚುರಿಯನ್‌ನಲ್ಲಿ ಆಫ್ರಿಕಾ ವಿರುದ್ಧ ಬಾಬರ್ ಅವರ ಮೊದಲ T20I ಶತಕವಾಗಿತ್ತು. ಆ ಪಂದ್ಯದಲ್ಲಿ ಅವರು 59 ಎಸೆತಗಳಲ್ಲಿ 122 ರನ್ ಗಳಿಸಿದರು.
ಇಂಗ್ಲೆಂಡ್ ವಿರುದ್ಧ
ಸೆಪ್ಟೆಂಬರ್ 22, 2022 ರಂದು ಕರಾಚಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕಾಗಿ ಬಾಬರ್ ತಮ್ಮ 2 ನೇ T20I ಶತಕವನ್ನು ಗಳಿಸಿದರು.
ನ್ಯೂಝಿಲೆಂಡ್ ವಿರುದ್ಧ
2023 ರಂದು ಕಿವೀಸ್ ವಿರುದ್ಧ ಅಜಮ್ ತಮ್ಮ 3ನೇ T20I ಶತಕವನ್ನು ಗಳಿಸಿದರು. ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 58 ಎಸೆತಗಳಲ್ಲಿ 101 ರನ್ ಗಳಿಸಿದರು.
ಮೊಹಮ್ಮದ್ ಶಮಿಗೆ ಎರಡನೇ ಮದುವೆ?: ಫೋಟೋ ವೈರಲ್