25 ವರ್ಷಗಳ ಬಳಿಕ ಪಾಕ್ ವಿರುದ್ಧ ಗೆದ್ದ ಬಾಂಗ್ಲಾ

25 August 2024

Pic credit: Google

ಪೃಥ್ವಿ ಶಂಕರ

Pic credit: Google

ರಾವಲ್ಪಿಂಡಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಅವಮಾನಕರ ಸೋಲು ಕಂಡಿದೆ. ಕುತೂಹಲಕಾರಿ ಎಂದರೆ ಬಾಂಗ್ಲಾದೇಶ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಟೆಸ್ಟ್‌ನಲ್ಲಿ ಸೋಲಿಸಿದೆ.

Pic credit: Google

1999 ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಸೋಲಿಸಿತ್ತು. ಇದೀಗ 25 ವರ್ಷಗಳ ಬಳಿಕ ಇದೀಗ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.

Pic credit: Google

ಇದಲ್ಲದೆ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಬಾಂಗ್ಲಾದೇಶ ಪಾತ್ರವಾಗಿದೆ. ಇದಕ್ಕೂ ಮುನ್ನ ಭಾರತ ಸೇರಿದಂತೆ ಯಾವುದೇ ತಂಡ ಈ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ.

Pic credit: Google

ಇದಲ್ಲದೆ ರಾವಲ್ಪಿಂಡಿಯಲ್ಲಿ, ಪಾಕಿಸ್ತಾನದ ವೇಗದ ಬೌಲರ್‌ಗಳು ಒಟ್ಟಾಗಿ ಒಟ್ಟು 705 ಎಸೆತಗಳನ್ನು ಬೌಲ್ ಮಾಡಿದರು. ಇದರೊಂದಿಗೆ 20 ವರ್ಷಗಳ ಹಿಂದೆ ಭಾರತದ ವಿರುದ್ಧದ ಹಳೆಯ ದಾಖಲೆ ಮುರಿದಿದೆ.

Pic credit: Google

ತವರಿನ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ವೇಗಿಗಳು ಬೌಲ್ ಮಾಡಿದ ಗರಿಷ್ಠ ಎಸೆತಗಳಾಗಿವೆ. ಇದಕ್ಕೂ ಮುನ್ನ ಪಾಕಿಸ್ತಾನದ ವೇಗದ ಬೌಲರ್‌ಗಳು ಭಾರತದ ವಿರುದ್ಧ 672 ಎಸೆತಗಳನ್ನು ಎಸೆದಿದ್ದರು.

Pic credit: Google

ಕಳೆದ 1294 ದಿನಗಳಿಂದ ತವರಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ತಂಡವು 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ಸೋಲು ಮತ್ತು 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

Pic credit: Google

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ.