ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

22 November 2023

ಸಚಿನ್ ತೆಂಡೂಲ್ಕರ್ 1998ರಲ್ಲಿ 12 ಶತಕಗಳನ್ನು ಸಿಡಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸಚಿನ್ ನಂತರ 2018ರಲ್ಲಿ 11 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಇದ್ದಾರೆ.

ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 2003ರಲ್ಲಿ 11 ಶತಕಗಳನ್ನು ಬಾರಿಸಿದ್ದರು.

2017ರಲ್ಲೂ ವಿರಾಟ್ ಕೊಹ್ಲಿ 11 ಶತಕ ಸಿಡಿಸಿದ್ದು, ಈ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

2010ರಲ್ಲಿ 10 ಶತಕಗಳನ್ನು ಬಾರಿಸಿದ್ದ ಹಾಶಿಮ್ ಆಮ್ಲಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಅರವಿಂದ ಡಿ ಸಿಲ್ವಾ ಅವರು 1997 ರಲ್ಲಿ 10 ಶತಕಗಳನ್ನು ಬಾರಿಸಿದ್ದರು.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2019ರಲ್ಲಿ 10 ಶತಕ ಸಿಡಿಸಿದ್ದರು.

ಶ್ರೀಲಂಕಾದ ಮಾಜಿ ಆರಂಭಿಕ ತಿಲಕರತ್ನೆ ದಿಲ್ಶಾನ್ 2009ರಲ್ಲಿ 10 ಶತಕ ಸಿಡಿಸಿದ್ದರು.

ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ 1999ರಲ್ಲಿ 10 ಶತಕ ಸಿಡಿಸಿದ್ದರು.