ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ದಾಖಲೆ ಹೇಗಿದೆ?
24 November 2023
ದ್ರಾವಿಡ್ ಅವರನ್ನು ನವೆಂಬರ್ 2021 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರ ಒಪ್ಪಂದವು 2023 ರ ODI ವಿಶ್ವಕಪ್ ವರೆಗೆ ಇತ್ತು.
ರಾಹುಲ್ ದ್ರಾವಿಡ್
ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಮುಂದಾಳತ್ವದಲ್ಲಿ ಭಾರತ ಟೆಸ್ಟ್ ಮತ್ತು ODI ಎರಡರಲ್ಲೂ ನಂ.1 ತಂಡವಾಯಿತು.
ಟೀಮ್ ಇಂಡಿಯಾ ನಂ. 1
ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಗೆಲುವಿನ ಸೂತ್ರಧಾರ ದ್ರಾವಿಡ್.
ಭಾರತ vs ಆಸ್ಟ್ರೇಲಿಯಾ
ಭಾರತದ ಗನ್ ಓಪನರ್ ಶುಭ್'ಮನ್ ಗಿಲ್ ಅವರು ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಆಟಗಾರರಾದರು.
ಶುಭ್ಮನ್ ಗಿಲ್
ಕಳಪೆ ಫಾರ್ಮ್'ನಿಂದ ಕಂಗೆಟ್ಟಿದ್ದ ಕೊಹ್ಲಿ ಫಾರ್ಮ್'ಗೆ ಮರಳಲು ದ್ರಾವಿಡ್ ಸಹಾಯ ಮಾಡಿದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ.
ವಿರಾಟ್ ಕೊಹ್ಲಿ
ODI ವಿಶ್ವಕಪ್ ಮುಂಚಿತವಾಗಿ ನಿಖರವಾದ ಯೋಜನೆಯೊಂದಿಗೆ, ದ್ರಾವಿಡ್, ರೋಹಿತ್ ಅನೇಕ ಪ್ರಯೋಗ ನಡೆಸಿದರು.
ODI ವಿಶ್ವಕಪ್
ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ, ಭಾರತವು ಶ್ರೀಲಂಕಾ, ನ್ಯೂಝಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯನ್ನು ಮತ್ತು ಬಾಂಗ್ಲಾದೇಶ, ವೆಸ್ಟ್ ಇಂಡೀಸ್‌ನಲ್ಲಿನ ವಿದೇಶ ಸರಣಿಗಳನ್ನು ಗೆದ್ದಿತು.
ವಿದೇಶದಲ್ಲಿ ಯಶಸ್ಸು
ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ, ಭಾರತವು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ತವರಿನ T20I ಸರಣಿಯನ್ನೂ ಗೆದ್ದಿತು. ಮತ್ತು ಏಷ್ಯಾಕಪ್ ಅನ್ನು ಸಹ ಗೆದ್ದಿತು.
ಏಷ್ಯಾ ಕಪ್
ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತವು 2022 ರ T20 ವಿಶ್ವಕಪ್‌ನ ಸೆಮಿಫೈನಲ್ ತಲುಪಿತು. ಆದರೆ ಇಂಗ್ಲೆಂಡ್ ವಿರುದ್ಧ ಸೋತಿತು.
ಟಿ20 ವಿಶ್ವಕಪ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್'ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಫೈನಲ್‌ಗೆ ತಲುಪಿತು. ಆದರೆ, ಫೈನಲ್'ನಲ್ಲ ಆಸ್ಟ್ರೇಲಿಯಾ ವಿರುದ್ಧ ಸೋತಿತು.
WTC ಫೈನಲ್
ODI ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವುದರೊಂದಿಗೆ ದ್ರಾವಿಡ್ ಅವರ ಕೋಚ್ ಅವಧಿಯು ಕೊನೆಗೊಂಡಿತು.