24-11-2023

ಸೂರ್ಯನ ನಾಯಕತ್ವ: ಚೇಸಿಂಗ್'ನಲ್ಲಿ ದಾಖಲೆ ಬರೆದ ಭಾರತ

ಭಾರತಕ್ಕೆ ಜಯ

ವಿಶಾಖಪಟ್ಟಣಂನಲ್ಲಿ ಗುರುವಾರ ನಡೆದ ಟಿ20 ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಇದರೊಂದಿಗೆ ಟೀಮ್ ಇಂಡಿಯಾ ಕೆಲವು ದಾಖಲೆ ಮಾಡಿದೆ.

ಯಶಸ್ವಿ ಚೇಸ್

208 ರನ್'ಗಳ ಟಾರ್ಗೆಟ್ ಅನ್ನು ಭಾರತ 19.5 ಓವರ್'ಗಳಲ್ಲಿ ಮುಟ್ಟಿತು. ಇದು ಟಿ20ಯಲ್ಲಿ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ರನ್ ಚೇಸ್ ಆಗಿದೆ.

2019 ರಲ್ಲಿ ಗೆಲುವು

ಇದಕ್ಕೂ ಮುನ್ನ ಭಾರತ 2019ರಲ್ಲಿ ಟಿ20ಯಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 208 ರನ್ ಗಳಿಸಿ ಜಯಭೇರಿ ಬಾರಿಸಿತ್ತು.

ವಿಶೇಷ ದಾಖಲೆ

ಈ ಮೂಲಕ ಟೀಮ್ ಇಂಡಿಯಾ ತನ್ನ ಹೆಸರಿನಲ್ಲಿ ವಿಶೇಷ ದಾಖಲೆ ಮಾಡಿದೆ. ಟಿ20ಯಲ್ಲಿ ಗರಿಷ್ಠ ಬಾರಿ 200ಕ್ಕೂ ಹೆಚ್ಚು ಸ್ಕೋರ್ ಚೇಸ್ ಮಾಡಿದ ತಂಡ ಭಾರತ ಆಗಿದೆ.

5 ಬಾರಿ 200+

ಭಾರತ ಇದುವರೆಗೆ ಟಿ20ಯಲ್ಲಿ ಐದು ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

ಸೂರ್ಯಕುಮಾರ್

ಈ ಪಂದ್ಯದಲ್ಲಿ ನಾಯಕರಾಗಿದ್ದ ಸೂರ್ಯಕುಮಾರ್ 42 ಎಸೆತಗಳಲ್ಲಿ 80 ರನ್ ಗಳಿಸಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಅತಿ ಹೆಚ್ಚು ಪಂದ್ಯಶ್ರೇಷ್ಠ

ಟಿ20ಯಲ್ಲಿ ಭಾರತ ಪರ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡ ವಿಚಾರದಲ್ಲಿ ಸೂರ್ಯಕುಮಾರ್ ಈಗ ರೋಹಿತ್ ಅವರನ್ನು ಹಿಂದಿಕ್ಕಿದ್ದಾರೆ.

13 ಬಾರಿ ಪಂದ್ಯಶ್ರೇಷ್ಠ

ರೋಹಿತ್ 148 ಪಂದ್ಯಗಳಲ್ಲಿ 12 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರೆ, ಸೂರ್ಯಕುಮಾರ್ 54 ಪಂದ್ಯಗಳಲ್ಲಿ 13 ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.