ಅಕ್ಟೋಬರ್​ನಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟು ಯಾರು ಗೊತ್ತೇ?

23 November 2023

ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಯಾರು ಎಂಬ ಸುದ್ದಿ ಹೊರಬಿದ್ದಿದೆ. ಮೊದಲ 3 ಸ್ಥಾನದಲ್ಲಿ ಕ್ರಿಕೆಟಿಗರೇ ಇದ್ದಾರೆ.

ಜನಪ್ರಿಯ ಕ್ರೀಡಾಪಟು

ಭಾರತದ ಮಾಜಿ ನಾಯಕ, ವಿರಾಟ್ ಕೊಹ್ಲಿ ಅವರು ಅಕ್ಟೋಬರ್, 2023 ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಆಗಿದ್ದಾರೆ.

ವಿರಾಟ್ ಕೊಹ್ಲಿ

ಐಸಿಸಿ ವಿಶ್ವಕಪ್'ನಲ್ಲಿ ಕಿಂಗ್ ಕೊಹ್ಲಿ ಇಡೀ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು.

ಅತ್ಯುತ್ತಮ ಆಟಗಾರ

ಅಕ್ಟೋಬರ್ ತಿಂಗಳ ಭಾರತದ ಜನಪ್ರಿಯ ಕ್ರೀಡಾಪಟುಗಳಲ್ಲಿ ಎಂಎಸ್ ಧೋನಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ನಿವೃತ್ತಿಯಾಗಿದ್ದರೂ ಧೋನಿ ಹವಾ ಮಾತ್ರ ಕಡಿಮೆ ಆಗಿಲ್ಲ.

ಎಂಎಸ್ ಧೋನಿ

2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎಂಎಸ್ ಧೋನಿ ಭಾರತದಲ್ಲಿ ಕೊಹ್ಲಿಯಷ್ಟೇ ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ.

ಅಭಿಮಾನಿ ಬಳಗ

ಅಕ್ಟೋಬರ್, 2023 ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ರೋಹಿತ್ ಶರ್ಮಾ

ವಿಶ್ವಕಪ್'ನಲ್ಲಿ ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಕ್ಯಾಪ್ಟನ್ ಆದ ಬಳಿಕ ರೋಹಿತ್ ಅಭಿಮಾನಿ ಬಳಗ ದೊಡ್ಡದಾಗಿದೆ.

ಹಿಟ್​ಮ್ಯಾನ್ ಆಟ

ಹೀಗೆ ಅಕ್ಟೋಬರ್, 2023 ರಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳ ಟಾಪ್ ಮೂರರಲ್ಲಿ ಭಾರತೀಯ ಕ್ರಿಕೆಟಿಗರೇ ಸ್ಥಾನ ಪಡೆದುಕೊಂಡಿದ್ದಾರೆ.

ಮೂವರು ಕ್ರಿಕೆಟಿಗರು

IND vs AUS 1st T20I: ವಿಶಾಖಪಟ್ಟಣಂ ಪಿಚ್ ಯಾರಿಗೆ ಸಹಕಾರಿ?