ಐಪಿಎಲ್ 2024 ಹರಾಜಿನಲ್ಲಿ RCB ಕಣ್ಣಿಟ್ಟಿದೆ ಈ 6 ಪ್ಲೇಯರ್ಸ್ ಮೇಲೆ

07 December 2023

Author: Vinay Bhat

ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಅವರನ್ನು ಉಳಿಸಿಕೊಳ್ಳದ ಕಾರಣ, RCBಗೆ ವೇಗದ ದಾಳಿ ಮುನ್ನಡೆಸಲು ಸ್ಟಾರ್ ಬೌಲರ್ ಬೇಕಾಗಿದ್ದು, ಮಿಚೆಲ್ ಸ್ಟಾರ್ಕ್‌ ಮೇಲೆ ಕಣ್ಣಿಟ್ಟಿದೆ.

ಮಿಚೆಲ್ ಸ್ಟಾರ್ಕ್

ಮಿಚೆಲ್ ಸ್ಟಾರ್ಕ್ ಐಪಿಎಲ್ 2014 ರಿಂದ 2015 ರವರೆಗೆ ಆರ್‌ಸಿಬಿ ಪರ ಆಡಿದ್ದಾರೆ. ಆಗ 27 ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದರು.

ಎರಡನೇ ಬಾರಿ

IPL 2024 ರ ಹರಾಜಿನ ಮೊದಲು ವನಿಂದು ಹಸರಂಗ ಬಿಡುಗಡೆಯಾಗುವುದರಿಂದ, ಕ್ವಾಲಿಟಿ ಸ್ಪಿನ್ನರ್ ಅಗತ್ಯವಿದೆ. ಅಫ್ಘಾನ್ ತಂಡದ ಮುಜೀಬ್ ಉತ್ತಮ ಆಯ್ಕೆ.

ಮುಜೀಬ್ ಉರ್ ರೆಹಮಾನ್

ಮುಜೀಬ್ ಉರ್ ರೆಹಮಾನ್ ಅವರ T20 ವೃತ್ತಿಜೀವನದಲ್ಲಿ 6.7 ರ ಎಕಾನಮಿಯಲ್ಲಿ 244 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮುಜೀಬ್ T20

ವನಿಂದು ಹಸರಂಗಾಗೆ ಮತ್ತೊಂದು ಬದಲಿ ಆಟಗಾರ ಆದಿಲ್ ರಶೀದ್ ಆಗಿರಬಹುದು. ಇವರು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಆಗಿದ್ದಾರೆ.

ಆದಿಲ್ ರಶೀದ್

ರಚಿನ್ ರವೀಂದ್ರ ವಿಶ್ವಕಪ್ 2023 ರಲ್ಲಿ ನೀಡಿದ ಪ್ರದರ್ಶನ ಎಲ್ಲರಿಗೂ ತಿಳಿದಿದೆ. ಅವರು RCB ಗೆ ಅಗ್ರ ಕ್ರಮಾಂಕದಲ್ಲಿ ಉಪಯುಕ್ತ ಆಯ್ಕೆಯಾಗಿರಬಹುದು.

ರಚಿನ್ ರವೀಂದ್ರ

ರಚಿನ್ ರವೀಂದ್ರ ಅವರ ಕುಟುಂಬ ಬೆಂಗಳೂರಿಗೆ ಸೇರಿದ್ದು, ಆದ್ದರಿಂದ ಅವರು RCB ಸೇರಿದರೆ ದೊಡ್ಡ ಅಭಿಮಾನಿಗಳವೇ ಸಿಗಲಿದೆ.

ಬೆಂಗಳೂರು ಸಂಪರ್ಕ

RCB ಗೆ ಕೆಲವು ಕ್ವಿಕ್‌ಫೈರ್ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವನ್ನು ಹೊಂದಿರುವ ಕೆಳ ಮಧ್ಯಮ ಕ್ರಮಾಂಕದಲ್ಲಿ ಭಾರತದ ಆಟಗಾರನ ಅಗತ್ಯವಿದೆ. ಇದಕ್ಕೆ ಶಾರುಖ್ ಉತ್ತಮ ಆಯ್ಕೆ.

ಶಾರುಖ್ ಖಾನ್

RCB ಹರ್ಷಲ್ ಪಟೇಲ್ ಸೇರಿದಂತೆ ಕೆಲವು ಭಾರತೀಯ ವೇಗದ ಬೌಲರ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಕಾರ್ತಿಕ್ ತ್ಯಾಗಿ ಮೇಲೆ ಕಣ್ಣಿಟ್ಟಿರಬಹುದು.

ಕಾರ್ತಿಕ್ ತ್ಯಾಗಿ