19-03-2024

CSK ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ XI ಹೇಗರಲಿದೆ ನೋಡಿ

Author: Vinay Bhat

ಫಾಫ್ ಡುಪ್ಲೆಸಿಸ್

ಐಪಿಎಲ್ 2024 ರಲ್ಲಿ ಫಾಫ್ ಡುಪ್ಲೆಸಿಸ್ ಆರ್‌ಸಿಬಿಯನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇವರು ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿದ್ದಾರೆ.

ವಿರಾಟ್ ಕೊಹ್ಲಿ

ಎರಡು ತಿಂಗಳ ಅಂತರದ ಬಳಿಕ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈಗಾಗಲೇ ತಂಡ ಸೇರಿರುವ ಕೊಹ್ಲಿ ಫಾಫ್ ಜೊತೆ ಇನ್ನಿಂಗ್ಸ್ ತೆರೆಯಲಿದ್ದಾರೆ.

ರಜತ್ ಪಾಟಿದರ್

ಇಂಜುರಿಯ ಕಾರಣ ಐಪಿಎಲ್ 2023 ರ ನಂತರ, ರಜತ್ ಪಾಟಿದಾರ್ ಈ ಬಾರಿ ಆಡಲು ಫಿಟ್ ಆಗಿದ್ದಾರೆ. ಆರ್​ಸಿಬಿಗಾಗಿ ಇವರು ನಂ. 3 ರಲ್ಲಿ ಬ್ಯಾಟ್ ಮಾಡುತ್ತಾರೆ.

ಕ್ಯಾಮರೂನ್ ಗ್ರೀನ್

ಮಂಬೈ ಇಂಡಿಯನ್ಸ್​ನಿಂದ 17.50 ಕೋಟಿ ರೂ. ಗೆ ಖರೀದಿಸಿದ ಕ್ಯಾಮರೂನ್ ಗ್ರೀನ್‌ ಮೇಲೆ ಸಾಕಷ್ಟು ಭರವಸೆ ಇಡಲಾಗಿದೆ. ಈ ಆಲ್ರೌಂಡರ್ ನಂ. 4ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಆರ್‌ಸಿಬಿಗೆ ಪ್ರಮುಖ ಆಟಗಾರನಾಗಲಿದ್ದಾರೆ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ ಐಪಿಎಲ್ 2024 ರಲ್ಲಿ RCB ಗಾಗಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುತ್ತಾರೆ. ಇದು ಇವರ ಕೊನೆಯ ಐಪಿಎಲ್ ಎಂದುಕೂಡ ಹೇಳಲಾಗಿದೆ.

ಮಹಿಪಾಲ್ ಲೊಮ್ರೋರ್

ಆರ್​ಸಿಬಿಗೆ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ನಲ್ಲಿ ಮಹಿಪಾಲ್ ಲೊಮ್ರೋರ್ ಇದ್ದಾರೆ. ಅಂತೆಯೆ ಕರ್ಣ್ ಶರ್ಮಾ ಐಪಿಎಲ್ 2024 ರಲ್ಲಿ RCB ಗೆ ಮೊದಲ ಆಯ್ಕೆಯ ಸ್ಪಿನ್ನರ್.

ಮೊಹಮ್ಮದ್ ಸಿರಾಜ್

ಐಪಿಎಲ್ 2024 ರಲ್ಲಿ ಮೊಹಮ್ಮದ್ ಸಿರಾಜ್ RCB ಯ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇವರಿಗೆ ರೀಸ್ ಟೋಪ್ಲೆ ಸಾಥ್ ನೀಡಲಿದ್ದಾರೆ.

ಆಕಾಶ್ ದೀಪ್

ಭಾರತದ ಎರಡನೇ ವೇಗಿಯಾಗಿ ಯಶ್ ದಯಾಳ್ ಮತ್ತು ವಿಜಯ್ ಕುಮಾರ್ ವೈಶಾಕ್ ಅವರಿಗಿಂತ ಆಕಾಶ್ ದೀಪ್ ಮೊದಲ ಆದ್ಯತೆ ಪಡೆಯಲಿದ್ದಾರೆ.