ಸಂಭಾವನೆಯಲ್ಲಿ ಬಾಬರ್ ಅಝಂ ಹಿಂದಿಕ್ಕಿದ ಸ್ಮೃತಿ ಮಂಧಾನ

20-February-2024

Author: Vinay Bhat

ಬಾಬರ್ ಅಝಂ ಪುರುಷರ ಕ್ರಿಕೆಟ್‌ನ ಸ್ಟಾರ್ ಆಟಗಾರನಾಗಿದ್ದಾರೆ. ಹಾಗೆಯೆ, ಸ್ಮೃತಿ ಮಂಧಾನ ಮಹಿಳಾ ಕ್ರಿಕೆಟ್‌ನ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗಿದೆ.

ಬಾಬರ್-ಮಂಧಾನ

ಸ್ಮೃತಿ ಮಂಧಾನ ಮತ್ತು ಬಾಬರ್ ಇಬ್ಬರನ್ನೂ ಮ್ಯಾಚ್ ವಿನ್ನರ್ ಎಂದು ಹೇಳಲಾಗುತ್ತದೆ. ಇವರು ಯಾವುದೇ ಲೀಗ್ ಆಡಿದರೆ ಹಣದ ಮಳೆ ಸುರಿಯುತ್ತದೆ.

ಅದ್ಭುತ ಪ್ರದರ್ಶನ

ಆದರೆ, ಅಚ್ಚರಿಯ ಸುದ್ದಿಯೊಂದಿದೆ. ಸಂಭಾವನೆ ವಿಚಾರದಲ್ಲಿ ಸ್ಮೃತಿ ಮಂಧಾನ ಅವರು ಬಾಬರ್ ಅಝಂಗಿಂತ ಮುಂದಿದ್ದಾರೆ ಎಂದರೆ ನಂಬಲೇಬೇಕು.

ಮಂಧಾನಗೆ ಡಿಮ್ಯಾಂಡ್

ಪಿಎಸ್‌ಎಲ್‌ನಲ್ಲಿ ಬಾಬರ್ ಅಝಂ ಅವರ ಸಂಭಾವನೆ ನೋಡಿದರೆ, ಪೇಶಾವರ್ ಝಲ್ಮಿ ತಂಡವು ಒಂದು ಋತುವಿನಲ್ಲಿ ಇವರಿಗೆ 1.23 ಕೋಟಿ ರೂ. ನೀಡುತ್ತದೆ.

ಬಾಬರ್ ಅಝಂ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂಧಾನ ಒಂದು ಸೀಸನ್‌ಗೆ 3.4 ಕೋಟಿ ರೂ. ಪಡೆಯುತ್ತಾರೆ. ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

ಸ್ಮೃತಿ ಮಂಧಾನ

ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 23 ರಿಂದ ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ.

ಮಹಿಳಾ ಪ್ರೀಮಿಯರ್ ಲೀಗ್

ಮಂಧಾನ ನೇತೃತ್ವದ ಆರ್​ಸಿಬಿ ತಂಡವು ಫೆಬ್ರವರಿ 24 ರಂದು ಯುಪಿ ವಾರಿಯರ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

RCB vs UPW