27-01-2024
ಟೆಸ್ಟ್ ಕ್ರಿಕೆಟಿಗೆ ಕಾಲಿಡುವ ಕನಸಿನಲ್ಲಿದ್ದ ರಿಂಕುಗೆ ದೊಡ್ಡ ಶಾಕ್
Author: Vinay Bhat
ರಿಂಕು ಸಿಂಗ್
ಭಾರತದ ಯುವ ಬ್ಯಾಟರ್ ರಿಂಕು ಸಿಂಗ್ ಕಡಿಮೆ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಭರವಸೆ ಮೂಡಿಸಿದ್ದಾರೆ.
ಟಿ20 ಸ್ಟಾರ್
ರಿಂಕು ಕೇವಲ 6 ತಿಂಗಳ ಹಿಂದೆ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ಮೊದಲಿಗೆ ಟಿ20 ಆಡಿ ಅದ್ಭುತ ಪ್ರದರ್ಶನ ತೋರಿ ಬಳಿಕ ಏಕದಿನದಲ್ಲೂ ಸ್ಥಾನ ಪಡೆದರು.
ಟೆಸ್ಟ್ ಕ್ರಿಕೆಟ್
ರಿಂಕು ದೇಶಿಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲೂ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆದಿದೆ.
ಭಾರತ ಎ
ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮೊದಲು, ರಿಂಕು ಸಿಂಗ್ ಭಾರತ ಎ ತಂಡದ ಪರ ಆಡುವ ಅವಕಾಶವನ್ನು ಪಡೆದಿದ್ದರು. ಆದರೆ ಇಲ್ಲಿ ರಿಂಕುಗೆ ಆಘಾತ ಉಂಟಾಗಿದೆ.
ಶೂನ್ಯ ರನ್
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್'ನಲ್ಲಿ ಭಾರತ ಎ ಪರ ಚೊಚ್ಚಲ ಪಂದ್ಯವಾಡಿದ ರಿಂಕು 4 ಎಸೆತಗಳನ್ನು ಆಡಿ ಖಾತೆ ತೆರೆಯದೆ ಔಟಾದರು.
ಸರ್ಫರಾಜ್
ರಿಂಕು ವಿಫಲರಾದರು, ಆದರೆ ಸರ್ಫರಾಜ್ ಖಾನ್ ಮತ್ತೊಂದು ಅತ್ಯುತ್ತಮ ಶತಕ ಗಳಿಸಿದರು. ಸರ್ಫರಾಜ್ 161 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಪಡಿಕ್ಕಲ್ ಸಾಥ್
ಸರ್ಫರಾಜ್ ಹೊರತಾಗಿ, ಕರ್ನಾಟಕ ಯುವ ಆರಂಭಿಕ ದೇವದತ್ ಪಡಿಕ್ಕಲ್ ಕೂಡ ಅತ್ಯುತ್ತಮ ಶತಕ ಗಳಿಸಿದರು. ಪಡಿಕ್ಕಲ್ 105 ರನ್ ಗಳಿಸಿದರು.
ರೋಹಿತ್-ಸೆಹ್ವಾಗ್ ದಾಖಲೆ ಪುಡಿಗಟ್ಟಿದ ಜೈಸ್ವಾಲ್