ರೋಹಿತ್-ಸೆಹ್ವಾಗ್ ದಾಖಲೆ ಪುಡಿಗಟ್ಟಿದ ಜೈಸ್ವಾಲ್

26 January 2024

Author: Vinay Bhat

ಯಶಸ್ವಿ ಜೈಸ್ವಾಲ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಬ್ಬರಿಸುತ್ತಿದ್ದಾರೆ.

ಯಶಸ್ವಿ ಜೈಸ್ವಾಲ್

ಕಷ್ಟಕರವಾದ ಹೈದರಾಬಾದ್ ಪಿಚ್‌ನಲ್ಲಿ ಜೈಸ್ವಾಲ್ ಕೇವಲ 47 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ದಿನದಾಟದ ಅಂತ್ಯಕ್ಕೆ 76 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಅರ್ಧಶತಕ

ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.

ಜೈಸ್ವಾಲ್ ದಾಖಲೆ

ಜೈಸ್ವಾಲ್ ಟೆಸ್ಟ್ ಇನ್ನಿಂಗ್ಸ್‌ನ ಮೊದಲ 4 ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯನಾದರು. ಇವರು ಇಂಗ್ಲೆಂಡ್ ವಿರುದ್ಧ ಮೊದಲ 4 ಓವರ್‌ಗಳಲ್ಲಿ 27 ರನ್ ಗಳಿಸಿದ್ದರು.

ಆ 27 ರನ್

ರೋಹಿತ್ ಶರ್ಮಾ ಮತ್ತು ಸೆಹ್ವಾಗ್ ಮೊದಲ 4 ಓವರ್‌ಗಳಲ್ಲಿ 25 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಆದರೆ ಜೈಸ್ವಾಲ್ 27 ರನ್ ಗಳಿಸಿದ್ದಾರೆ.

ಜೈಸ್ವಾಲ್ ದಾಖಲೆ

ಜೈಸ್ವಾಲ್ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ ಅವರು 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಜೈಸ್ವಾಲ್ ಆಟ

ಯಶಸ್ವಿ ಜೈಸ್ವಾಲ್ ಟಾಮ್ ಹಾರ್ಟ್ಲಿಗೆ ಮರೆಯಲಾಗದ ಸ್ವಾಗತ ನೀಡಿದರು. ಎಡಗೈ ಸ್ಪಿನ್ನರ್‌ನ ಟೆಸ್ಟ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು.

ಹಾರ್ಟ್ಲಿಗೆ ಶಾಕ್