30-12-2023

ರಿಷಭ್ ಪಂತ್ ಹೊಸ ಫೋಟೋ ಕಂಡು ಶಾಕ್ ಆದ ಫ್ಯಾನ್ಸ್

Author: Vinay Bhat

ಪಂತ್ ಗಾಯ

ಕಳೆದ ವರ್ಷ ಡಿ. 30 ರಂದು ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಪಂತ್ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು.

ಕಮ್'ಬ್ಯಾಕ್

ಪಂತ್ ಈಗ ಕಮ್'ಬ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಫ್ಯಾನ್ಸ್ ಕೂಡ ಇವರ ಆಗಮನಕ್ಕೆ ಕಾಯುತ್ತಿದ್ದಾರೆ. ಪಂತ್ ಕೂಡ ಕ್ರಿಕೆಟ್ ಮೈದಾನಕ್ಕೆ ಮರಳಲು ಬೆವರು ಸುರಿಸುತ್ತಿದ್ದಾರೆ.

ಹೊಸ ಫೋಟೋ

ಪಂತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಪಾದಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಫ್ಯಾನ್ಸ್ ಶಾಕ್ ಆಗಿದ್ದಾರೆ.

ದಪ್ಪಗಾದ ಕಾಲು

ಪಂತ್ ಪೋಸ್ಟ್ ಮಾಡಿರುವ ಹೊಸ ಫೋಟೋದಲ್ಲಿ ಅವರ ಒಂದು ಕಾಲು ದಪ್ಪವಾಗಿದ್ದು, ಇನ್ನೊಂದು ಕಾಲು ತೆಳ್ಳಗಿದೆ. ಪುನರಾಗಮನಕ್ಕೆ ಶ್ರಮಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಶಸ್ತ್ರಚಿಕಿತ್ಸೆ

ಕಾರು ಅಪಘಾತದಿಂದ ಪಂತ್ ಅವರು ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದರು. ಇದಕ್ಕಾಗಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ NCA ಯಲ್ಲಿ ಫಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ.

ವಿಶ್ವಕಪ್ ಆಡಿಲ್ಲ

ಈ ಗಾಯದಿಂದಾಗಿ ಪಂತ್ ಐಪಿಎಲ್ 2023, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಗಳಿಂದ ಹೊರಗುಳಿದಿದ್ದರು.

ಐಪಿಎಲ್ 2024

ಜನವರಿ 2024 ರಲ್ಲಿ ಪಂತ್ ಮರಳಬಹುದು ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಐಪಿಎಲ್‌ 2024 ರಲ್ಲಿ ಆಡಲಿದ್ದಾರೆ ಎಂಬ ಮಾತಿದೆ.