ಭಾರತ ಟೆಸ್ಟ್ ತಂಡದಿಂದ ಗಿಲ್ ಔಟ್?

ಭಾರತ ಟೆಸ್ಟ್ ತಂಡದಿಂದ ಗಿಲ್ ಔಟ್?

26 December 2023

Author: Vinay Bhat

TV9 Kannada Logo For Webstory First Slide

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಕೇವಲ 3 ದಿನಗಳಲ್ಲಿ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.

ಮೊದಲ ಟೆಸ್ಟ್

ಟೆಸ್ಟ್ ಕ್ರಿಕೆಟಿನಲ್ಲಿ ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಶುಭ್'ಮನ್ ಗಿಲ್ ಈ ಬಾರಿ ಕೂಡ ವೈಫಲ್ಯ ಅನುಭವಿಸಿದ್ದಾರೆ. ಮುಂದೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ.

ಗಿಲ್ ಬಗ್ಗೆ ಪ್ರಶ್ನೆ

ಗಿಲ್ ಅವರನ್ನು ಗುರಿಯಾಗಿಸಿಕೊಂಡು ದಿನೇಶ್ ಕಾರ್ತಿಕ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಪ್ರಕಾರ, ಟೆಸ್ಟ್ ತಂಡದಲ್ಲಿ ಗಿಲ್ ಸ್ಥಾನ ದೊಡ್ಡ ಪ್ರಶ್ನೆಯಾಗಿದೆ.

ದಿನೇಶ್ ಕಾರ್ತಿಕ್

ಟೆಸ್ಟ್‌ನಲ್ಲಿ ಗಿಲ್ ನಿರೀಕ್ಷೆಗೆ ತಕ್ಕಂತೆ ಆಡಿತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ಅವರು ಆಡದಿದ್ದರೆ, ಸ್ಥಾನ ಕಳೆದುಕೊಳ್ಳುವುದು ಖಚಿತ.

ಗಿಲ್ ವೈಫಲ್ಯ

ಸೆಂಚುರಿಯನ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಗಿಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 28 ರನ್ ಗಳಿಸಿದರಷ್ಟೆ.

28 ರನ್

ಇದುವರೆಗೆ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 35 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಆದರೆ ಅವರು 1000 ರನ್‌ಗಳನ್ನು ಕೂಡ ಪೂರೈಸಿಲ್ಲ.

35 ಇನ್ನಿಂಗ್ಸ್‌

ಗಿಲ್ ಅವರ ಟೆಸ್ಟ್ ವೃತ್ತಿಜೀವನವು ಈಗ ತೂಗುಯ್ಯಾಲೆಯಲ್ಲಿದೆ. ಕೇಪ್ ಟೌನ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಿದರೆ ಮಾತ್ರ ಗಿಲ್'ಗೆ ಟೆಸ್ಟ್'ನಲ್ಲಿ ಸ್ಥಾನ ಸಿಗಬಹುದು.

ಸಂಕಷ್ಟದಲ್ಲಿ ಗಿಲ್