ಶೂನ್ಯಕ್ಕೆ ಔಟಾದ ರೋಹಿತ್‌ ಶರ್ಮಾಗೆ ಬಿಗ್ ಶಾಕ್

29-December-2023

Author: Vinay Bhat

ಸೂಪರ್'ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತು.

ಭಾರತಕ್ಕೆ ಸೋಲು

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಸ್ವತಃ ನಾಯಕ ರೋಹಿತ್ ಶರ್ಮಾ ವಿಫಲರಾದರು.

ಬ್ಯಾಟಿಂಗ್ ವೈಫಲ್ಯ

ರೋಹಿತ್ ಶರ್ಮಾ ಆಫ್ರಿಕನ್ ಬೌಲಿಂಗ್ ದಾಳಿಗೆ ತತ್ತರಿಸಿ ಖಾತೆ ತೆರೆಯದೆ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಅವರ ಹೆಸರಿಗೆ ಕೆಟ್ಟ ದಾಖಲೆ ಸೇರಿದೆ.

ಶೂನ್ಯಕ್ಕೆ ಔಟ್

ರೋಹಿತ್ 8 ವರ್ಷಗಳ ಬಳಿಕ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾದರು. ಇದಕ್ಕೂ ಮುನ್ನ 2015ರಲ್ಲಿ ರೋಹಿತ್ ಸೊನ್ನೆ ಸುತ್ತಿದ್ದರು.

ಕೆಟ್ಟ ದಾಖಲೆ

ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 31 ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಎಂಟನೇ ಭಾರತೀಯ ಎನಿಸಿಕೊಂಡಿದ್ದಾರೆ.

31 ಬಾರಿ 0

ಜಹೀರ್ ಖಾನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 43 ಬಾರಿ ಸೊನ್ನೆ ಸುತ್ತಿದ್ದಾರೆ. ಇಶಾಂತ್ ಶರ್ಮಾ 41 ಬಾರಿ, ಹರ್ಭಜನ್ 37, ಕುಂಬ್ಳೆ 35, ಕೊಹ್ಲಿ- 34 ಬಾರಿ ಸೊನ್ನೆಗೆ ಔಟಾಗಿದ್ದಾರೆ.

ಜಹೀರ್ ಖಾನ್

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜರನ್ನು ಮೀರಿಸಿ ಮತ್ತೊಂದು ಬೃಹತ್ ದಾಖಲೆ ನಿರ್ಮಿಸಿದ್ದಾರೆ.

ಕೊಹ್ಲಿ ದಾಖಲೆ

ವಿರಾಟ್ ಕೊಹ್ಲಿ ದಾಖಲೆಯ ಏಳನೇ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ 2000+ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈವರೆಗೆ ಯಾರೂ ಕೂಡ ಈ ಸಾಧನೆ ಮಾಡಿಲ್ಲ.

2000+ ರನ್